ADVERTISEMENT

ಕೆಎಸ್‌ಎಫ್‌ಎ ಅಧ್ಯಕ್ಷರಾಗಿ ಎನ್.ಎ. ಹ್ಯಾರಿಸ್ ಪುನರಾಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 14:38 IST
Last Updated 30 ಜುಲೈ 2023, 14:38 IST
ಎನ್.ಎ. ಹ್ಯಾರಿಸ್
ಎನ್.ಎ. ಹ್ಯಾರಿಸ್   

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುನರಾಯ್ಕೆಯಾಗಿದ್ದಾರೆ. ‌ಪ್ರಧಾನ ಕಾರ್ಯದರ್ಶಿಯಾಗಿ ಎಂ. ಕುಮಾರ್‌ ಆಯ್ಕೆಯಾಗಿದ್ದಾರೆ.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‌ರಾಜ್ಯ ಫುಟ್‌ಬಾಲ್ ಸಂಸ್ಥೆಯ 54ನೇ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಪಿ.ಎಂ. ಶಕೀಲ್ ಅಬ್ದುಲ್ ರಹಿಮಾನ್‌, ಬಿ. ಕಮಲ್, ಜಿ.ಆರ್. ಸಂಜಯ್ (ಮೈಸೂರು), ಅಮಿತ್ ಪಾಟೀಲ (ಬೆಳಗಾವಿ) ಮತ್ತು ಇಸ್ಮಾಯಿಲ್ ಮುಸ್ಬಾ (ಉತ್ತರ ಕನ್ನಡ), ಉಪಪ್ರಧಾನ ಕಾರ್ಯದರ್ಶಿಗಳಾಗಿ ಹನೀಫ್ ಮಹಮ್ಮದ್, ಅಸ್ಲಂ ಅಹಮದ್ ಖಾನ್ ಮತ್ತು ಸರವಣನ್ ಧರ್ಮನ್, ಖಜಾಂಚಿಯಾಗಿ ಬಿ.ಕೆ.ಮುನಿರಾಜ್ ಆಯ್ಕೆಯಾದರು.

ADVERTISEMENT

ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ್ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.