ADVERTISEMENT

ನೇಷನ್ಸ್‌ ಕಪ್‌ | ಮೂರನೇ ಸ್ಥಾನಕ್ಕಾಗಿ ಭಾರತ ತಂಡಕ್ಕೆ ಒಮನ್‌ ಸವಾಲು

ಪಿಟಿಐ
Published 7 ಸೆಪ್ಟೆಂಬರ್ 2025, 15:26 IST
Last Updated 7 ಸೆಪ್ಟೆಂಬರ್ 2025, 15:26 IST
<div class="paragraphs"><p>ಭಾರತ ಫುಟ್‌ಬಾಲ್‌ ತಂಡದ ಆಟಗಾರರು</p></div>

ಭಾರತ ಫುಟ್‌ಬಾಲ್‌ ತಂಡದ ಆಟಗಾರರು

   

ಎಕ್ಸ್‌ ಚಿತ್ರ

ಹಿಸೋರ್‌ (ತಾಜಿಕಿಸ್ತಾನ): ಭಾರತ ಪುರುಷರ ಫುಟ್‌ಬಾಲ್‌ ತಂಡವು ಸಿಎಎಫ್‌ಎ ನೇಷನ್ಸ್‌ ಕಪ್‌ ಟೂರ್ನಿಯಲ್ಲಿ ಸೋಮವಾರ ಮೂರನೇ ಸ್ಥಾನಕ್ಕಾಗಿ ಒಮನ್‌ ವಿರುದ್ಧ ಸೆಣಸಲಿದೆ. 

ADVERTISEMENT

ಎಂಟು ತಂಡಗಳಿದ್ದ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತ ತಂಡವು ಸ್ಪರ್ಧಿಸಿತ್ತು. ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಉಜ್ಬೇಕಿಸ್ತಾನ (7 ಅಂಕ) ಮತ್ತು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಇರಾನ್‌ (7 ಅಂಕ) ಫೈನಲ್‌ನಲ್ಲಿ ಸೆಣಸಲಿವೆ.

ಎರಡು ಗುಂಪುಗಳಲ್ಲಿ ಎರಡನೇ ಸ್ಥಾನ ಪಡೆದ ಭಾರತ (4) ಮತ್ತು ಒಮನ್‌ (7) ತಂಡಗಳು ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.

ಫಿಫಾ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ (133ನೇ ಸ್ಥಾನ) 54 ಸ್ಥಾನ ಮೇಲಿರುವ ಒಮನ್ ತಂಡವು ಇಲ್ಲಿನ ಹಿಸೋರ್ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಗೆಲ್ಲುವ ಫೇವರಿಟ್ ಎನಿಸಿದೆ. ಆದರೂ ಖಾಲಿದ್ ಜಮೀಲ್ ಮಾರ್ಗದರ್ಶನದ ತಂಡವು ಉತ್ತಮ ಆಟ ಪ್ರದರ್ಶನದ ವಿಶ್ವಾಸದಲ್ಲಿದೆ.

ಬಿ ಗುಂಪಿನಲ್ಲಿದ್ದ ಭಾರತ ತಂಡವು ಆತಿಥೇಯ ತಾಜಿಕಿಸ್ಥಾನ ತಂಡವನ್ನು 2–1ರಿಂದ ಸೋಲಿಸಿತ್ತು. ಆದರೆ, ಪ್ರಬಲ ಇರಾನ್‌ ವಿರುದ್ಧ 0–3ರಿಂದ ಪರಾಭವಗೊಂಡಿತು. ಅಫ್ಗಾನಿಸ್ತಾನ ವಿರುದ್ಧ ಗೋಲುರಹಿತವಾಗಿ ಡ್ರಾ ಸಾಧಿಸಿತ್ತು.

ವಿಶ್ವದ 79ನೇ ಕ್ರಮಾಂಕದ ಒಮನ್‌ ತಂಡವು ಗುಂಪು ಹಂತದಲ್ಲಿ ಉಜ್ಬೇಕಿಸ್ತಾನ ವಿರುದ್ಧ 1–1ರಿಂದ ಡ್ರಾ ಸಾಧಿಸಿದ್ದರೆ, ಕಿರ್ಗಿಸ್ತಾನ ಮತ್ತು ತುರ್ಕಮೆನಿಸ್ತಾನ ತಂಡಗಳನ್ನು 2–1ರಿಂದ ಮಣಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.