ADVERTISEMENT

ಕೋವಿಡ್ ಸೋಂಕು ಇದೆ ಎಂದ ಫುಟ್‌ಬಾಲ್ ಆಟಗಾರ ಎಜೆಕ್ವಿಲ್ ಗರೇ

ರಾಯಿಟರ್ಸ್
Published 15 ಮಾರ್ಚ್ 2020, 21:01 IST
Last Updated 15 ಮಾರ್ಚ್ 2020, 21:01 IST
ಎಜೆಕ್ವಿಲ್ ಗರೇ
ಎಜೆಕ್ವಿಲ್ ಗರೇ   

ಮ್ಯಾಡ್ರಿಡ್: ತಾನು ಕೋವಿಡ್‌ಗೆ ಒಳಗಾಗಿದ್ದೇನೆ ಎಂದು ಹೇಳುವ ಮೂಲಕ ಫುಟ್‌ಬಾಲ್ ಆಟಗಾರ ಎಜೆಕ್ವಿಲ್ ಗರೇ ಕ್ರೀಡಾಲೋಕದಲ್ಲಿ ಅಚ್ಚರಿ ಮೂಡಿಸಿದ್ದಾರೆ.ವೆಲೆನ್ಸಿಯಾ ತಂಡದಲ್ಲಿ ಆಡುತ್ತಿರುವ ಅರ್ಜೆಂಟೀನಾದ ಡಿಫೆಂಡರ್ ಎಜೆಕ್ವಿಲ್ ಸೋಂಕು ತಗುಲಿದ ಮೊದಲ ಲಾಲಿಗಾ ಆಟಗಾರ ಆಗಿದ್ದಾರೆ.

‘ಈ ವರ್ಷ ನನ್ನ ಪಾಲಿಗೆ ಅದೃಷ್ಟದ್ದು ಅಲ್ಲ ಎಂದೆನಿಸುತ್ತದೆ. ಸೋಂಕಿಗೆ ಒಳಗಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರಾಮವಾಗಿಯೇ ಇದ್ದೇನೆ. ಆದರೂ ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆಯನ್ನು ಪಾಲಿಸುತ್ತಿದ್ದೇನೆ. ನನ್ನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ’ ಎಂದು ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರುವರಿಯಲ್ಲಿ ಮೊಣಕಾಲು ನೋವಿಗೆ ಒಳಗಾಗಿರುವ ಅವರು ಅಂದಿನಿಂದ ಅಂಗಣದಿಂದ ದೂರವೇ ಉಳಿದಿದ್ದಾರೆ.

ADVERTISEMENT

ಇಟಲಿ ಬಿಟ್ಟರೆ ಯುರೋಪ್‌ನಲ್ಲಿ ಅತಿಹೆಚ್ಚು ಸೋಂಕಿತರು ಕಂಡು ಬಂದ ದೇಶ ಸ್ಪೇನ್. ಇಲ್ಲಿ ನಡೆಯಬೇಕಾಗಿದ್ದ ಎಲ್ಲ ಫುಟ್‌ಬಾಲ್ ಟೂರ್ನಿಗಳನ್ನು ಎರಡು ವಾರಗಳಿಗೆ ಮುಂದೂಡಲಾಗಿದೆ. ಇಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದು ಶನಿವಾರದಿಂದ ಎಲ್ಲ ಚಟುವಟಿಕೆಯನ್ನೂ ಸ್ಥಗಿತಗೊಳಿಸಲಾಗಿದೆ. ದೇಶದಲ್ಲಿ 6,400 ಮಂದಿಗೆ ಸೋಂಕು ತಗುಲಿದ್ದು 196 ಮಂದಿ ಸಾವಿಗೀಡಾಗಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.