ಬೆಂಗಳೂರು: ರೆಬೆಲ್ಸ್ ಎಫ್‌ಸಿ ತಂಡ 4–0 ಗೋಲುಗಳಿಂದ ಸೂಪರ್ ಡಿವಿಷನ್ ಲೀಗ್ ಪಂದ್ಯದಲ್ಲಿ ಗುರುವಾರ ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡವನ್ನು ಸೋಲಿಸಿತು.
ಅಶೋಕ ನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೆಬೆಲ್ಸ್ ಎಫ್‌ಸಿ ತಂಡದ ಜಾಕ್ ಲಿಯಾನ್‌ಕಾಮವಿ ನೀಹಸಿಯಾಲ್ (45+2ನೇ ನಿ.), ಆರ್.ಎಸ್. ಜೆಲ್ಸಿಸ್ (13ನೇ ನಿ.), ಕಾಪ್‌ಖಾನ್‌ಖುಹಾಲ್ ಟಿ. (22ನೇ ನಿ.) ಮತ್ತು ಅರಿಕ್ ಥಾಪ (65ನೇ ನಿ.) ಚೆಂಡನ್ನು ಗುರಿ ಸೇರಿಸಿದರು.
ಇನ್ನೊಂದು ಪಂದ್ಯದಲ್ಲಿ ಎಫ್‌ಸಿ ಅಗ್ನಿಪುತ್ರ ತಂಡ 5–1 ಗೋಲುಗಳಿಂದ ಎಂಇಜಿ ಮತ್ತು ಸೆಂಟರ್ ಎಫ್‌ಸಿ ತಂಡವನ್ನು ಮಣಿಸಿತು. ಅಗ್ನಿಪುತ್ರ ತಂಡದ ಅಹಮದ್ ಫೈಯಜ್ ಖಾನ್ (13ನೇ ನಿ.),ಭೂಪೇಂದರ್ ಸಿಂಗ್ (22ನೇ ನಿ.), ನವೀನ್ ಕೆ. (57ನೇ ನಿ.), ಪಿ.ಸಿ. ಕೃಷ್ಣ ಜೆ. (71ನೇ ನಿ.) ಅಫಜರ್ ನೂರಾನಿ (90+1ನೇ ನಿ.) ಗೋಲುಗಳನ್ನು ಬಾರಿಸಿದರು. ಎಂಇಜಿ ತಂಡದ ಪರ ಅಭಿನಂದ್ (17ನೇ ನಿ.) ಗೋಲು ಹೊಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.