ADVERTISEMENT

ಸಹಾಯ ಹಸ್ತ ಚಾಚಿದ ಆರ್‌ಕೆಎಫ್‌ಸಿ

ಪಿಟಿಐ
Published 21 ಏಪ್ರಿಲ್ 2020, 20:19 IST
Last Updated 21 ಏಪ್ರಿಲ್ 2020, 20:19 IST

ಶ್ರೀನಗರ: ಈ ಬಾರಿ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಗೆ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದ ದಿ ರಿಯಲ್‌ ಕಾಶ್ಮೀರ್‌ ಫುಟ್‌ಬಾಲ್‌ ಕ್ಲಬ್‌ (ಆರ್‌ಕೆಎಫ್‌ಸಿ), ಕೊರೊನಾ ವೈರಾಣುವಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಸೈನಿಕರ‌ ನೆರವಿಗೆ ಧಾವಿಸಿದೆ.

ಆರ್‌ಕೆಎಫ್‌ಸಿ ಮಾಲೀಕ ಸಂದೀಪ್‌ ಚಾಟ್ಟೊ ಅವರು ಸೋಮವಾರ ಶ್ರೀನಗರದ ಡೆಪ್ಯೂಟಿ ಕಮಿಷನರ್‌ ಶಾಹೀದ್‌ ಇಕ್ಬಾಲ್‌ ಚೌಧರಿ ಅವರನ್ನು ಭೇಟಿ ಮಾಡಿ 150 ಪಿಪಿಇ ಕಿಟ್‌, 3,000 ಕೈಗವಸು ಹಾಗೂ 15,000 ಮಾಸ್ಕ್‌ಗಳನ್ನು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT