ADVERTISEMENT

2034ರ ಫಿಫಾ ವಿಶ್ವಕಪ್ ಆತಿಥ್ಯ ವಹಿಸಲಿರುವ ಸೌದಿ ಅರೇಬಿಯಾ

ಏಜೆನ್ಸೀಸ್
Published 11 ಡಿಸೆಂಬರ್ 2024, 16:46 IST
Last Updated 11 ಡಿಸೆಂಬರ್ 2024, 16:46 IST
   

ಪ್ಯಾರಿಸ್: 2034ರ ಫಿಫಾ ವಿಶ್ವಕಪ್ ಆತಿಥ್ಯವನ್ನು ಸೌದಿ ಅರೇಬಿಯಾ ವಹಿಸಲಿದೆ ಎಂದು ಫಿಫಾ ಬುಧವಾರ ಖಚಿತಪಡಿಸಿದೆ.

ಫಿಫಾದ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇವೇಳೆ, 2030ರ ವಿಶ್ವಕಪ್‌ಗೆ ಮೊರಕ್ಕೊ, ಸ್ಪೇನ್ ಮತ್ತು ಪೋರ್ಚುಗಲ್ ಜಂಟಿ ಆತಿಥ್ಯ ವಹಿಸಲಿವೆ ಎಂದು ದೃಢಪಡಿಸಿದೆ. ದಕ್ಷಿಣ ಅಮೆರಿಕದಲ್ಲೂ ಪಂದ್ಯಾವಳಿಯ ಮೂರು ಪಂದ್ಯಗಳೂ ನಡೆಯಲಿವೆ ಎಂದು ಅದು ತಿಳಿಸಿದೆ.

ಕತಾರ್ ಬಳಿಕ ಫಿಫಾ ವಿಶ್ವಕಪ್ ಪಂದ್ಯಾವಳಿ ಆತಿಥ್ಯ ವಹಿಸಿದ ಮಧ್ಯಪ್ರಾಚ್ಯದ 2ನೇ ದೇಶ ಸೌದಿ ಅರೇಬಿಯಾವಾಗಿದೆ.

ADVERTISEMENT

2034ರ ಆವೃತ್ತಿಯು ಒಂದೇ ಆತಿಥೇಯ ರಾಷ್ಟ್ರದಲ್ಲಿ ಮೊದಲ ಬಾರಿಗೆ 48 ತಂಡಗಳ ಪಂದ್ಯಾವಳಿಯನ್ನು ಆಯೋಜಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಸೌದಿ ಅರೇಬಿಯಾದ ಐದು ನಗರಗಳಾದ ರಿಯಾದ್, ಜೆಡ್ಡಾ, ಅಲ್ ಖೋಬರ್, ಅಭಾ ಮತ್ತು ನಿಯೋಮ್‌ನ 15 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ:

ರಿಯಾದ್‌ನ 92,000-ವೀಕ್ಷಕರ ಸಾಮರ್ಥ್ಯ ಹೊಂದಿರುವ ಕಿಂಗ್ ಸಲ್ಮಾನ್ ಸ್ಟೇಡಿಯಂನಲ್ಲಿ ಆರಂಭಿಕ ಮತ್ತು ಫೈನಲ್ ಪಂದ್ಯಗಳು ನಡೆಯುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.