ADVERTISEMENT

ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಮೈತ್ರೇಯಿ ಮಿಂಚು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 14:24 IST
Last Updated 29 ಮಾರ್ಚ್ 2023, 14:24 IST
ಮೈತ್ರೇಯಿ ಪಾಲಸಮುದ್ರಂ
ಮೈತ್ರೇಯಿ ಪಾಲಸಮುದ್ರಂ   

ಬೆಂಗಳೂರು: ಮೈತ್ರೇಯಿ ಪಾಲಸಮುದ್ರಂ ಗಳಿಸಿದ ಅಮೋಘ ಆರು ಗೋಲುಗಳ ನೆರವಿನಿಂದ ಕರ್ನಾಟಕ ಫುಟ್‌ಬಾಲ್ ತಂಡದವರು ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯದ ಆರಂಭ ಮಾಡಿದರು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನಾಲ್ಕನೇ ಗುಂಪಿನ ಪಂದ್ಯದಲ್ಲಿ ಕರ್ನಾಟಕ 9–1ರಿಂದ ಗುಜರಾತ್ ತಂಡವನ್ನು ಸೋಲಿಸಿತು. ಮೈತ್ರೇಯಿ 7, 9, 25, 29, 45+2, 90+1ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಕಾವ್ಯಾ ಫಕೀರಸ್ವಾಮಿ (22, 45+1) ಮತ್ತು ಮೊನಾಲಿಸಾ ಮರಾಂಡಿ (21ನೇ ನಿ.) ಕರ್ನಾಟಕದ ಗೆಲುವಿಗೆ ಕಾಣಿಕೆ ನೀಡಿದರು.

ಗುಜರಾತ್ ತಂಡದ ಏಕೈಕ ಗೋಲನ್ನು ಖುಷ್ಬು ಸರೋಜ್‌ (49ನೇ ನಿ.) ಗಳಿಸಿದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಮಣಿಪುರ ತಂಡವು 5–0ಯಿಂದ ಬಿಹಾರ್ ವಿರುದ್ಧ ಗೆದ್ದಿತು. ವಿಜೇತ ತಂಡದ ಪರ ಸಲಾಮ್‌ ರೀನಾ ರಾಯ್ ದೇವಿ (7, 40 ಮತ್ತು 52ನೇ ನಿ.) ಹ್ಯಾಟ್ರಿಕ್ ಗೋಲು ಹೊಡೆದರು. ಎಸ್‌. ಲಿಂಡಾ ಕೋಮ್‌ (45+3ನೇ ನಿ., 90+2ನೇ ನಿ.) ಎರಡು ಗೋಲು ದಾಖಲಿಸಿದರು.

ಕರ್ನಾಟಕ ತಂಡವು ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.