ADVERTISEMENT

ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಶಿಲ್ಲಾಂಗ್‌ಗೆ ಇಂಡಿಯನ್‌ ನೇವಿ ಸವಾಲು ಇಂದು

ಪಿಟಿಐ
Published 16 ಆಗಸ್ಟ್ 2025, 0:04 IST
Last Updated 16 ಆಗಸ್ಟ್ 2025, 0:04 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಶಿಲ್ಲಾಂಗ್/ಕೊಕ್ರಜಾರ್ : ಸ್ಥಳೀಯ ನೆಚ್ಚಿನ ಶಿಲ್ಲಾಂಗ್ ಲಜಾಂಗ್ ಎಫ್‌ಸಿ ಮತ್ತು ಉತ್ತಮ ಲಯದಲ್ಲಿರುವ ಇಂಡಿಯನ್ ನೇವಿ ಎಫ್‌ಟಿ ತಂಡಗಳು ಶನಿವಾರ 134ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿವೆ.

ಹಾಲಿ ಚಾಂಪಿಯನ್‌ ನಾರ್ತ್‌ಈಸ್ಟ್‌ ಯುನೈಟೆಡ್ ಎಫ್‌ಸಿ ತಂಡವು ದಿನದ ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ  ಬೋಡೊಲ್ಯಾಂಡ್‌ ಎಫ್‌ಸಿ ವಿರುದ್ಧದ ಸವಾಲನ್ನು ಎದುರಿಸಲಿದೆ.

ADVERTISEMENT

ಶಿಲ್ಲಾಂಗ್‌ ತಂಡವು ಗುಂಪು ಹಂತದಲ್ಲಿ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದಿತ್ತು. ಆರು ಅಂಕ ಗಳಿಸಿ ಇ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಎಂಟರ ಘಟ್ಟ ಪ್ರವೇಶಿಸಿತ್ತು. ನೇವಿ ತಂಡವು ಎರಡರಲ್ಲಿ ಗೆಲುವು, ಒಂದರಲ್ಲಿ ಡ್ರಾ ಸಾಧಿಸಿ (7 ಅಂಕ), ಎಫ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.

ನಾರ್ತ್‌ಈಸ್ಟ್‌ ತಂಡವು ಎರಡು ಗೆಲುವು ಮತ್ತು ಒಂದು ಪಂದ್ಯ ಡ್ರಾ ಸಾಧಿಸಿ ಏಳು ಅಂಕಗಳೊಂದಿಗೆ ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಬೋಡೊಲ್ಯಾಂಡ್‌ ತಂಡವು ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 9 ಅಂಕ ಸಂಪಾದಿಸಿ ಡಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.