ADVERTISEMENT

ಕ್ಷಮೆ ಕೋರಿದ ಎಫ್‌ಸಿ ಸೋಲ್‌ ಕ್ಲಬ್‌

ಏಜೆನ್ಸೀಸ್
Published 18 ಮೇ 2020, 21:22 IST
Last Updated 18 ಮೇ 2020, 21:22 IST

ಸೋಲ್‌ : ವಾರಾಂತ್ಯ ಫುಟ್‌ಬಾಲ್‌ ಲೀಗ್‌ ಪಂದ್ಯದ ವೇಳೆ ಪ್ರೇಕ್ಷಕರ ಆಸನಗಳಲ್ಲಿ ಲೈಂಗಿಕ ಗೊಂಬೆ ಗಳನ್ನು (ಸೆಕ್ಸ್ ಡಾಲ್ಸ್‌) ಇಟ್ಟು ‘ತೀವ್ರ ಮುಜುಗರ’ ಮೂಡಿಸಲು ಕಾರಣವಾಗಿದ್ದಕ್ಕೆ ದಕ್ಷಿಣ ಕೊರಿಯಾದ ಪ್ರಮುಖ ಫುಟ್‌ಬಾಲ್‌ ಕ್ಲಬ್‌ ಸೋಮವಾರ ಕ್ಷಮಾಪಣೆ ಕೋರಿದೆ.

ಕೊರೊನಾ ಸೋಂಕಿನ ಕಾರಣ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ಪಂದ್ಯ ಗಳು ನಡೆಯುತ್ತಿವೆ. ಈ ವೇಳೆ ಖಾಲಿ ಆಸನಗಳಲ್ಲಿ ಇಂಥ ಬೊಂಬೆಗಳನ್ನಿ ಡಲಾಗಿತ್ತು. ಆದರೆ, ‘ಇದಕ್ಕೂ ಲೈಂಗಿಕಾರ್ಷಣೆಯ ಗೊಂಬೆಗಳಿಗೂ ಸಂಬಂಧವಿಲ್ಲ‌’ ಎಂದು ಎಫ್‌ಸಿ ಸೋಲ್‌ ಕ್ಲಬ್‌ ತಿಳಿಸಿದೆ.

ಆದರೆ ಕೆಲವು ‘ಕೃತಕ ಪ‍್ರೇಕ್ಷಕ’ರಿಗೆ ತೊಡಿಸಲಾಗಿದ್ದ ಟಿ ಶರ್ಟ್‌ಗಳ ಮೇಲೆ ‘ಲೈಂಗಿಕ ಆಟಕೆ’ ಮಾರಾಟ ಸಂಸ್ಥೆಯ ಲೋಗೊ ಇದ್ದವು. ಇತರ ಕೆಲವು ಗೊಂಬೆಗಳಿಗೆ ಮಾಸ್ಕ್‌ ತೊಡಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.