ಕೊರುನ್ನಾ, ಸ್ಪೇನ್: ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಇಲ್ಲಿಯ ಫುಟ್‌ಬಾಲ್ ಆಟಗಾರ ಟೋನಿ ಡೋವಲ್ ತಮ್ಮ ಶೂ ಕಳಚಿಟ್ಟು ವೈದ್ಯಕೀಯ ಸೇವೆಗೆ ಮುಂದಾಗಿದ್ದಾರೆ.
ಥಾಯ್ ಕ್ಲಬ್ ತಂಡವನ್ನು ಪ್ರತಿನಿಧಿಸುವ 29 ವರ್ಷದ ಟೋನಿ, ಔಷಧಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಪದವಿ ಪೂರೈಸಿದ ಬಳಿಕ ಫುಟ್‌ಬಾಲ್‌ನತ್ತ ಆಸಕ್ತಿ ಬೆಳೆಸಿಕೊಂಡ ಅವರು ವೈದ್ಯಕೀಯ ವೃತ್ತಿಯತ್ತ ಗಮನಹರಿಸಿರಲಿಲ್ಲ.
‘ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ವೃತ್ತಿಗೆ ಮರಳುತ್ತಿದ್ದೇನೆ. ಬಹಳ ದಿನಗಳ ಬಳಿಕ ನನ್ನ ತವರು ಸ್ಪೇನ್‌ನಲ್ಲಿದ್ದೇನೆ. ಸೇವೆಯ ಜೊತೆಯ ವೃತ್ತಿಯ ಪ್ರಾಯೋಗಿಕ ಅನುಭವ ಪಡೆಯಲಿದ್ದೇನೆ’ ಎಂದು ಡೋವಲ್ ಹೇಳಿದ್ದಾರೆ.
ಕೋವಿಡ್‌ಗೆ ಸ್ಪೇನ್‌ನಲ್ಲಿ ಇದುವರೆಗೆ 4,800 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.