ADVERTISEMENT

ಫುಟ್‌ಬಾಲ್ ವಿಶ್ವಕಪ್ ಸೆಮಿಫೈನಲ್, ಫೈನಲ್‌ನಲ್ಲಿ ಬಳಕೆಯಾಗುವ ಕಾಲ್ಚೆಂಡು ಇದೇ...

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 15:44 IST
Last Updated 11 ಡಿಸೆಂಬರ್ 2022, 15:44 IST
ಫುಟ್‌ಬಾಲ್‌ ವಿಶ್ವಕಪ್‌ನ ಸೆಮಿಫೈನಲ್‌, ಫೈನಲ್‌ನಲ್ಲಿ ಬಳಕೆಯಾಗಲಿರುವ ಕಾಲ್ಚೆಂಡು (ಟ್ವಿಟರ್‌ ಚಿತ್ರ: @roadto2022en)
ಫುಟ್‌ಬಾಲ್‌ ವಿಶ್ವಕಪ್‌ನ ಸೆಮಿಫೈನಲ್‌, ಫೈನಲ್‌ನಲ್ಲಿ ಬಳಕೆಯಾಗಲಿರುವ ಕಾಲ್ಚೆಂಡು (ಟ್ವಿಟರ್‌ ಚಿತ್ರ: @roadto2022en)   

ದೋಹಾ: ಫಿಫಾ ವಿಶ್ವಕಪ್-2022ರ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅಧಿಕೃತವಾಗಿ ಬಳಸಲಾಗುವ 'ಅಲ್ ಹಿಲ್ಮ್' ಹೆಸರಿನ ಕಾಲ್ಚೆಂಡನ್ನು ಅನಾವರಣ ಮಾಡಲಾಗಿದೆ.

ಅರೇಬಿಕ್‌ನಲ್ಲಿ ‘ಅಲ್ ಹಿಲ್ಮ್’ ಎಂದರೆ ‘ಕನಸು’ ಎಂದು ಅರ್ಥ. ಗುಂಪು ಹಂತಗಳ ಪಂದ್ಯಗಳಿಗೆ ‘ಅಲ್ ರಿಹ್ಲಾ’ (ಜರ್ನಿ–ಯಾನ) ಎಂಬ ಹೆಸರಿನ ಚೆಂಡನ್ನು ಬಳಸಲಾಗಿತ್ತು.

ಚಿನ್ನದ ಬಣ್ಣ ಮತ್ತು ಕೆಂಪು ಬಣ್ಣದ ತ್ರಿಕೋನ ಆಕೃತಿಗಳನ್ನು ಚೆಂಡಿನ ಮೇಲೆ ಮೂಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.