ADVERTISEMENT

ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ ಎಫ್‌ಸಿಗೆ ಜಯ

ಸ್ಟಾಫರ್ಡ್‌ ಕಪ್‌ ಫುಟ್‌ಬಾಲ್‌: ಡ್ರಾ ಪಂದ್ಯದಲ್ಲಿ ಬಿಎಫ್‌ಸಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:30 IST
Last Updated 24 ಫೆಬ್ರುವರಿ 2023, 22:30 IST
ಕಿಕ್‌ಸ್ಟಾರ್ಟ್‌ ತಂಡದ ವಿಜ‌ಯ್‌ ಗೋಲು ಗಳಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ/ ಬಿ.ಎಚ್‌.ಶಿವಕುಮಾರ್
ಕಿಕ್‌ಸ್ಟಾರ್ಟ್‌ ತಂಡದ ವಿಜ‌ಯ್‌ ಗೋಲು ಗಳಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ/ ಬಿ.ಎಚ್‌.ಶಿವಕುಮಾರ್   

ಬೆಂಗಳೂರು: ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸಿದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದವರು ಸ್ಟಾಫರ್ಡ್‌ ಚಾಲೆಂಜ್‌ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ತಂಡ 3–2 ಗೋಲುಗಳಿಂದ ಕೇರಳ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.

ವಿರಾಮದ ವೇಳೆಗೆ 0–2 ರಲ್ಲಿ ಹಿನ್ನಡೆಯಲ್ಲಿದ್ದ ಕಿಕ್‌ಸ್ಟಾರ್ಟ್‌ ಆ ಬಳಿಕ ಪುಟಿದೆದ್ದು ನಿಂತಿತು. ಎಡ್ವಿನ್‌ ರೊಸಾರಿಯೊ (55ನೇ ನಿ.), ಸತೀಶ್ ಕುಮಾರ್ (61) ಮತ್ತು ಮುಜಾಮಿರ್‌ ಅಬ್ದುಲ್ಲಾ (84) ಗೋಲು ಗಳಿಸಿ ಗೆಲುವಿಗೆ ಕಾರಣರಾದರು.

ADVERTISEMENT

ಕೇರಳ ಯುನೈಟೆಡ್‌ ತಂಡಕ್ಕೆ 12ನೇ ನಿಮಿಷದಲ್ಲಿ ಒಂದು ಗೋಲು ‘ಉಡುಗೊರೆ’ ರೂಪದಲ್ಲಿ ದೊರೆತರೆ, ಇನ್ನೊಂದು ಗೋಲನ್ನು ಅಕ್ಮಲ್‌ ಶಾನ್‌ (42) ಗಳಿಸಿದರು.

ಬಿಎಫ್‌ಸಿ ಮತ್ತು ಶ್ರೀನಿಧಿ ಡೆಕ್ಕನ್‌ ಎಫ್‌ಸಿ ನಡುವಣ ಪಂದ್ಯ 1–1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು. ಬಿಎಫ್‌ಸಿ ಪರ ಹರ್ಮನ್‌ಪ್ರೀತ್ ಸಿಂಗ್‌ (15) ಮತ್ತು ಶ್ರೀನಿಧಿ ಪರ ಹಾಂಗ್‌ಜೊ ಅವರು ಗೋಲು ಗಳಿಸಿದರು. ಚೆನ್ನೈಯಿನ್‌ ಎಫ್‌ಸಿ 1–0 ಗೋಲಿನಿಂದ ಅಹಮದಾಬಾದ್‌ನ ಎಆರ್‌ಎ ಎಫ್‌ಸಿ ತಂಡವನ್ನು ಸೋಲಿಸಿತು. ಕೊನೆಯ ಪಂದ್ಯದಲ್ಲಿ ಡೆಲ್ಲಿ ಎಫ್‌ಸಿ 1–0 ಗೋಲಿನಿಂದ ಕೆಂಕ್ರೆ ಎಫ್‌ಸಿ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.