ADVERTISEMENT

‌ಸ್ಟಾಫರ್ಡ್‌ ಕಪ್‌: ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ಕಿರೀಟ

ಫೈನಲ್‌ನಲ್ಲಿ 2–1 ಗೋಲುಗಳ ಗೆಲುವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:45 IST
Last Updated 6 ಮಾರ್ಚ್ 2023, 19:45 IST
ಸ್ಟಾಫರ್ಡ್‌ ಚಾಲೆಂಜ್‌ ಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ. ನಿಂತವರು (ಎಡದಿಂದ) ಜಯಂತ್, ಚಿರಂಜೀತ್‌ ಗೊಗೊಯ್, ಅಜಯ್‌ ಅಲೆಕ್ಸ್, ಅನಿಲ್‌ ಚವಾಣ್, ಸುಭಾ, ನಿಖಿಲ್‌ ಮಾಲಿ, ಕಮ್ರನ್‌ ಫರೂಕ್, ಕಿನ್‌ಶುಕ್‌ ದೇವನಾಥ್, ಸುಶಿಲ್‌ ಮೇಟಿ, ಫೆರ್ನಾಂಡೊ ಸಾಂಟಿಯಾಗೊ (ಕೋಚ್), ಜಾನ್‌ ಕೆನೆತ್‌ ಜಾರ್ನ್‌ (ಸಹಾಯಕ ಕೋಚ್‌). ಕುಳಿತವರು: ಸೂರಜ್‌ ರಾವತ್, ಏನಮ್ ಜುರ್ವಾ, ಕಬೀರ್‌ ತೌಫೀಕ್, ಸುಧೀರ್‌ ಕೆ., ನಿಖಿಲ್‌ ರಾಜ್, ಮುರುಗೇಶ್‌ ಕುಮಾರ್, ಮೆಕಾರ್ಟನ್‌ ಲೂಯಿಸ್ ನಿಕ್ಸನ್, ಡಿ.ಧನುಷ್, ಸೆಲ್ವಿನ್‌ ಮಿರಾಂಡಾ, ಇರ್ಫಾನ್‌ ಯಾದವಾಡ, ಸೂರಜ್ ಮಲಿಕ್, ವಿನಿಲ್‌ ಪೂಜಾರಿ. –ಪ್ರಜಾವಾಣಿ ಚಿತ್ರ

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದವರು ಸ್ಟಾಫರ್ಡ್‌ ಚಾಲೆಂಜ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಕೆಎಸ್‌ಎಫ್‌ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯ ದಲ್ಲಿ ಬೆಂಗಳೂರಿನ ತಂಡ 2–1 ಗೋಲುಗಳಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು ಮಣಿಸಿತು.

ಜಿದ್ದಾಜಿದ್ದಿನ ಪೈಪೋಟಿ ನಡೆದ ಪಂದ್ಯದ 31ನೇ ನಿಮಿಷದಲ್ಲಿ ವಿನಿಲ್‌ ಪೂಜಾರಿ ಅವರು ಎಫ್‌ಸಿಬಿಯುಗೆ ಮುನ್ನಡೆ ತಂದಿತ್ತರು. ಫ್ರೀ ಕಿಕ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು.

ADVERTISEMENT

ಎರಡನೇ ಅವಧಿಯಲ್ಲಿ ಸೆಂಥಾಮಿಲ್ (71ನೇ ನಿ.) ಅವರು ಗೋಲು ಗಳಿಸಿ ಚೆನ್ನೈಯಿನ್‌ ತಂಡ ಸಮಬಲ ಗಳಿಸಲು ನೆರವಾದರು. ಆದರೆ ಸ್ಟಾಪೇಜ್‌ ಅವಧಿಯಲ್ಲಿ ಇರ್ಫಾನ್‌ ಯಾದವಾಡ (90+3ನೇ ನಿ.) ಅವರು ಗೋಲು ಗಳಿಸಿ ಬಿಯುಎಫ್‌ಸಿಗೆ ರೋಚಕ ಗೆಲುವು ತಂದುಕೊಟ್ಟರು.

ವಿಜೇತ ತಂಡ ಟ್ರೋಫಿ ಹಾಗೂ ₹ 2.50 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡರೆ, ರನ್ನರ್ಸ್‌ ಅಪ್‌ ತಂಡ ₹ 1.50 ಲಕ್ಷ ನಗದು ಬಹುಮಾನ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.