
ಬೆಂಗಳೂರು: ಕರ್ನಾಟಕ ತಂಡವು ಅಮೃತಸರದಲ್ಲಿ ನಡೆಯುತ್ತಿರುವ ಸಬ್ ಜೂನಿಯರ್ ಬಾಲಕರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್ ಟೂರ್ನಿಯ ಮೊದಲ ಚರಣದ ಎರಡನೇ ಪಂದ್ಯದಲ್ಲಿ 8–0ಯಿಂದ ಉತ್ತರಪ್ರದೇಶ ತಂಡವನ್ನು ಸುಲಭವಾಗಿ ಮಣಿಸಿತು.
ಮೌಂಟ್ ಲಿಟೇರಾ ಜೀ ಸ್ಕೂಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಜ್ಯ ತಂಡದ ಇ.ಸಂತೋಷ್ (12ನೇ, 45+3ನೇ ಹಾಗೂ 60ನೇ ನಿ.) ಹ್ಯಾಟ್ರಿಕ್ ಗೋಲು ಹೊಡೆದು ಮಿಂಚಿದರು. ಅವರಿಗೆ, ಗುರುಮಯೂಮ್ ಪ್ರೋಹಿತ್ ಕುಮಾರ್ (5ನೇ ಹಾಗೂ 10ನೇ ನಿ.), ವೇದ್ ಕೃಷ್ಣನಾಮ (41ನೇ ನಿ.), ರೆಂಗಬೆಕ್ ಸೆಖೊ (67ನೇ ನಿ.) ಹಾಗೂ ಏಕಲವ್ಯ ಆನಂದ್ ಗೋಯಂಕಾ (79ನೇ ನಿ.) ಉತ್ತಮ ಬೆಂಬಲ ನೀಡಿದರು. ಉತ್ತರಪ್ರದೇಶ ತಂಡದ ಆಟಗಾರರು ಗೋಲು ಗಳಿಸುವಲ್ಲಿ ವಿಫಲರಾದರು.
ಕರ್ನಾಟಕ ತಂಡವು ಶುಕ್ರವಾರ (ಅ.31) ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.