ADVERTISEMENT

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌: ಎಡಿಇ ಎಫ್‌ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 15:26 IST
Last Updated 12 ನವೆಂಬರ್ 2018, 15:26 IST
ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡದ ಶಶಿಕುಮಾರ್‌ (ಹಸಿರು ಪೋಷಾಕು) ಮತ್ತು ಎಡಿಇ ತಂಡದ ಲಿಜೀತ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡದ ಶಶಿಕುಮಾರ್‌ (ಹಸಿರು ಪೋಷಾಕು) ಮತ್ತು ಎಡಿಇ ತಂಡದ ಲಿಜೀತ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ದ್ವಿತೀಯಾರ್ಧದಲ್ಲಿ ಪಾರಮ್ಯ ಮೆರೆದ ಎಡಿಇ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಎಡಿಇ 3–0 ಗೋಲುಗಳಿಂದ ಬೆಂಗಳೂರು ಈಗಲ್ಸ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಉಭಯ ತಂಡಗಳು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ ಎಡಿಇ ಆಟ ರಂಗೇರಿತು. 54ನೇ ನಿಮಿಷದಲ್ಲಿ ಸ್ಟೀಫನ್‌ ಗೋಲು ದಾಖಲಿಸಿದರು. 78ನೇ ನಿಮಿಷದಲ್ಲಿ ಲಿಜೀತ್ ಕಾಲ್ಚಳಕ ತೋರಿದ್ದರಿಂದ ಎಡಿಇ 2–0 ಮುನ್ನಡೆ ಪಡೆಯಿತು. 90+1ನೇ ನಿಮಿಷದಲ್ಲಿ ರಾಜ್‌ ಕಿರಣ್‌ ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ADVERTISEMENT

ಪರಿಕ್ರಮ ಪರಾಕ್ರಮ: ‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಪರಿಕ್ರಮ ಎಫ್‌ಸಿ ತಂಡ ಪರಾಕ್ರಮ ಮೆರೆಯಿತು.

ಪರಿಕ್ರಮ 3–0 ಗೋಲುಗಳಿಂದ ಬಿಯುಎಫ್‌ಸಿ ತಂಡವನ್ನು ಸೋಲಿಸಿತು.

ವಿಜಯೀ ತಂಡದ ಪ್ರಕಾಶ್‌ 16ನೇ ನಿಮಿಷದಲ್ಲಿ ಗೋಲು ಹೊಡೆದರು. ಚಿರಂಜೀವಿ ಮತ್ತು ಸತಮಿನ್ಲೆನ್‌ ಅವರು ಕ್ರಮವಾಗಿ 47 ಮತ್ತು 80+1ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.