ADVERTISEMENT

ಡ್ರಾ ಪಂದ್ಯದಲ್ಲಿ ಸೌತ್ ಯುನೈಟೆಡ್‌

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 19:04 IST
Last Updated 28 ನವೆಂಬರ್ 2018, 19:04 IST
ಡ್ರೀಮ್‌ ಯುನೈಟೆಡ್‌ ತಂಡದ ಜಿಗ್ಮಾ (ಎಡ) ಮತ್ತು ಸೌತ್‌ ಯುನೈಟೆಡ್‌ ತಂಡದ ಜೆವೆಲ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ
ಡ್ರೀಮ್‌ ಯುನೈಟೆಡ್‌ ತಂಡದ ಜಿಗ್ಮಾ (ಎಡ) ಮತ್ತು ಸೌತ್‌ ಯುನೈಟೆಡ್‌ ತಂಡದ ಜೆವೆಲ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆ್ಯರನ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಸೌತ್‌ ಯುನೈಟೆಡ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೌತ್‌ ಯುನೈಟೆಡ್‌ ಮತ್ತು ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ನಡುವಣ ಹೋರಾಟ 2–2 ಗೋಲುಗಳಿಂದ ಸಮಬಲವಾಯಿತು.

ಸೌತ್‌ ಯುನೈಟೆಡ್‌ ತಂಡ 13ನೇ ನಿಮಿಷದಲ್ಲಿ ಖಾತೆ ತೆರೆಯಿತು. ಆ್ಯರನ್‌ ಕಾಲ್ಚಳಕ ತೋರಿದರು. 18ನೇ ನಿಮಿಷದಲ್ಲಿ ಡ್ರೀಮ್‌ ಯುನೈಟೆಡ್‌ ತಂಡದ ರಾಹುಲ್‌, ಗೋಲು ದಾಖಲಿಸಿ 1–1 ಸಮಬಲಕ್ಕೆ ಕಾರಣರಾದರು.

ADVERTISEMENT

45+2ನೇ ನಿಮಿಷದಲ್ಲಿ ನಿಯಾಜ್‌ ಗೋಲು ಬಾರಿಸಿದ್ದರಿಂದ ಡ್ರೀಮ್‌ ಯುನೈಟೆಡ್‌ 2–1 ಗೋಲುಗಳ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದ ಸೌತ್‌ ಯುನೈಟೆಡ್‌ನ ಆಟ ರಂಗೇರಿತು. 68ನೇ ನಿಮಿಷದಲ್ಲಿ ಆ್ಯರನ್ ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

‘ಎ’ ಡಿವಿಷನ್‌ ಲೀಗ್‌ನ ಪಂದ್ಯದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ 4–1 ಗೋಲುಗಳಿಂದ ಆರ್‌ಡಬ್ಲ್ಯುಎಫ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಇನ್‌ಕಮ್‌ ಟ್ಯಾಕ್ಸ್‌ ತಂಡದ ಶಿವಪ್ರಸಾದ್‌ 5 ಮತ್ತು 68ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಕಿಂಗ್‌ಸ್ಲೆ (56 ನೇ ನಿಮಿಷ) ಮತ್ತು ಜೆ.ಪ್ರಸಾದ್‌ (68ನೇ ನಿ.) ತಲಾ ಒಂದು ಗೋಲು ಹೊಡೆದರು.

ಆರ್‌ಡಬ್ಲ್ಯುಎಫ್‌ ತಂಡದ ಭಾಸ್ಕರ್‌ 80ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.