ADVERTISEMENT

ಸೂಪರ್‌ ಡಿವಿಷನ್‌ ಫುಟ್‌ಬಾಲ್‌: ಓಜೋನ್‌ ಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 17:22 IST
Last Updated 3 ಡಿಸೆಂಬರ್ 2018, 17:22 IST
ಬೆಂಗಳೂರು ಇಂಡಿಪೆಂಡೆಂಟ್‌ ತಂಡದ ಡಿಸೋಜ (ಕೆಂಪು ಪೋಷಾಕು) ಮತ್ತು ಓಜೋನ್‌ ಎಫ್‌ಸಿ ತಂಡದ ಸುಖದೀಪ್‌ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ಇಂಡಿಪೆಂಡೆಂಟ್‌ ತಂಡದ ಡಿಸೋಜ (ಕೆಂಪು ಪೋಷಾಕು) ಮತ್ತು ಓಜೋನ್‌ ಎಫ್‌ಸಿ ತಂಡದ ಸುಖದೀಪ್‌ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮನ್ವೀರ್‌ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಓಜೋನ್‌ ಎಫ್‌ಸಿ ಬೆಂಗಳೂರು ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಓಜೋನ್‌ ಎಫ್‌ಸಿ 1–0 ಗೋಲಿನಿಂದ ಬೆಂಗಳೂರು ಇಂಡಿಪೆಂಡೆಂಟ್‌ ತಂಡವನ್ನು ಸೋಲಿಸಿತು.

ಮನ್ವೀರ್‌ 45ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ ತಂಡ ಗೆಲುವಿನ ಸಿಹಿ ಸವಿಯಿತು.

ಎಜಿಒಆರ್‌ಸಿ 3–1 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ವಿಜಯಿ ತಂಡದ ಪ್ರದೀಪ್‌ ಎರಡು ಗೋಲು ಬಾರಿಸಿ ಗಮನ ಸೆಳೆದರು. ಅವರು 55 ಮತ್ತು 68ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿದರು. ನರೇಶ್‌ 59ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಆರ್‌.ಎಸ್‌.ಸ್ಪೋರ್ಟ್ಸ್‌ ತಂಡದ ಸೂರ್ಯ 30ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.