ADVERTISEMENT

ಬೆಂಗಳೂರು ಯುನೈಟೆಡ್‌ ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 16:13 IST
Last Updated 11 ಸೆಪ್ಟೆಂಬರ್ 2025, 16:13 IST
ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಪಂದ್ಯದಲ್ಲಿ ಎಂಇಜಿ ತಂಡದ ಶರತ್‌ ನಾರಾಯಣನ್ (ಕೆಂಪು ಜರ್ಸಿ) ಮತ್ತು ರೂಟ್ಸ್ ತಂಡದ ಆಟಗಾರರು ಚೆಂಡಿಗಾಗಿ ಸೆಣಸಾಟ ನಡೆಸಿದರು ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.
ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಪಂದ್ಯದಲ್ಲಿ ಎಂಇಜಿ ತಂಡದ ಶರತ್‌ ನಾರಾಯಣನ್ (ಕೆಂಪು ಜರ್ಸಿ) ಮತ್ತು ರೂಟ್ಸ್ ತಂಡದ ಆಟಗಾರರು ಚೆಂಡಿಗಾಗಿ ಸೆಣಸಾಟ ನಡೆಸಿದರು ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.   

ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಗುರುವಾರ ನಡೆದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 6–0 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್‌ ಪರ ನಿಖಿಲ್ ರಾಜ್ ಮುರುಗೇಶ್ ಕುಮಾರ್ (14ನೇ ಮತ್ತು 40ನೇ) ಎರಡು ಗೋಲು ಗಳಿಸಿದರು. ರಾಯನ್ ವಿಲ್ಫ್ರೆಡ್ ಎಸ್. (5ನೇ) ಮತ್ತು ಮೊಹಮ್ಮದ್‌ ಅಲ್ತಾಬ್ ಹುಸೇನ್ (36ನೇ) ಗೋಲು ಗಳಿಸಿದರು. ಡ್ರೀಮ್‌ ತಂಡದ ಬೂಬ್ನಾಳನ್ (39ನೇ ಮತ್ತು 40+1ನೇ) ಎದುರಾಳಿ ತಂಡಕ್ಕೆ ಎರಡು ಉಡುಗೊರೆ ಗೋಲು ನೀಡಿದರು. 

ಪರಿಕ್ರಮ ಎಫ್‌ಸಿ ತಂಡವು 2–0 ಗೋಲುಗಳಿಂದ ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು. ಪರಿಕ್ರಮ ತಂಡದ ತಂಗ್ಜಲೆನ್ ಹಾವೋಕಿಪ್ (90+1ನೇ) ಗೋಲು ಗಳಿಸಿದರು. ಎಎಸ್‌ಸಿ ತಂಡದ ಸೌಬಮ್ ರೊನಾಲ್ಡೊ ಸಿಂಗ್ (56ನೇ) ಎದುರಾಳಿ ತಂಡಕ್ಕೆ ಉಡುಗೊರೆ ಗೋಲು ನೀಡಿದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಎಂಇಜಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವು ರೂಟ್ಸ್‌ ಎಫ್‌ಸಿ ತಂಡದೊಂದಿಗೆ ಗೋಲುರಹಿತವಾಗಿ ಡ್ರಾ ಸಾಧಿಸಿತು.

ಬೆಂಗಳೂರಿನ ಕೆಎಸ್‌ಎಫ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಪಂದ್ಯದಲ್ಲಿ ಎಂಇಜಿ ತಂಡದ ಶರತ್‌ ನಾರಾಯಣನ್(ಕೆಂಪು ಜರ್ಸಿ) ರೂಟ್ಸ್ ಫುಟ್‌ಬಾಲ್‌ ತಂಡದಆಟಗಾರರನ್ನು ತಪ್ಪಿಸಿ ಗೋಲ್‌ ಗಳಿಸಲು ಪ್ರಯತ್ನಿಸಿದರು ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.-Photo By/ KRISHNAKUMAR P S

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.