ADVERTISEMENT

ಫುಟ್‌ಬಾಲ್‌: ಡ್ರಾ ಪಂದ್ಯದಲ್ಲಿ ಎಂಇಜಿ

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:48 IST
Last Updated 23 ಡಿಸೆಂಬರ್ 2018, 17:48 IST
ಎಂಇಜಿ (ನೀಲಿ ಪೋಷಾಕು) ತಂಡದ ಮುಜೀಬ್‌ ಮತ್ತು ಸ್ಟೂಡೆಂಟ್‌ ಯೂನಿಯನ್‌ ತಂಡದ ತರುಣ್‌ ಕುಮಾರ್‌ ರೆಡ್ಡಿ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ
ಎಂಇಜಿ (ನೀಲಿ ಪೋಷಾಕು) ತಂಡದ ಮುಜೀಬ್‌ ಮತ್ತು ಸ್ಟೂಡೆಂಟ್‌ ಯೂನಿಯನ್‌ ತಂಡದ ತರುಣ್‌ ಕುಮಾರ್‌ ರೆಡ್ಡಿ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಂಇಜಿ ಆ್ಯಂಡ್‌ ಸೆಂಟರ್‌ ಮತ್ತು ಸ್ಟೂಡೆಂಟ್ಸ್‌ ಯೂನಿಯನ್‌ ನಡುವಣ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯ ಡ್ರಾ ಆಗಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಉಭಯ ತಂಡಗಳ ನಡುವಣ ಹೋರಾಟ 1–1 ಗೋಲುಗಳಿಂದ ಸಮಬಲವಾಯಿತು.

ಮೊದಲಾರ್ಧದ ಆರಂಭದ 20 ನಿಮಿಷಗಳಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ.

ADVERTISEMENT

27ನೇ ನಿಮಿಷದಲ್ಲಿ ಸ್ಟೂಡೆಂಟ್ಸ್‌ ತಂಡಕ್ಕೆ ಯಶಸ್ಸು ಲಭಿಸಿತು. ಎಮಾನುಯೆಲ್‌ ಗೋಲು ಹೊಡೆದರು.

42ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಎಂಇಜಿ ತಂಡದ ರೇಗನ್‌ ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಮುನ್ನಡೆಯ ಗೋಲು ಗಳಿಸಲು ಸಾಕಷ್ಟು ಶ್ರಮಿಸಿದವು. ಆದರೆ ಯಾರಿಗೂ ಯಶಸ್ಸು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.