ADVERTISEMENT

ಜೂನ್‌ನಲ್ಲಿ ಟರ್ಕಿ ಸೂಪರ್ ಲೀಗ್‌

ಏಜೆನ್ಸೀಸ್
Published 6 ಮೇ 2020, 17:14 IST
Last Updated 6 ಮೇ 2020, 17:14 IST

ಇಸ್ತಾಂಬುಲ್: ಕೊರೊನಾ ಹಾವಳಿಯಿಂದಾಗಿ ಮಾರ್ಚ್‌ನಲ್ಲಿ ಸ್ಥಗಿತಗೊಂಡಿದ್ದ ಟರ್ಕಿ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ ಜೂನ್ 12ರಂದು ಮತ್ತೆ ಆರಂಭಗೊಳ್ಳಲಿದೆ ಎಂದು ಅಲ್ಲಿನ ಫುಟ್‌ಬಾಲ್ ಫೆಡರೇಷನ್ ಬುಧವಾರ ತಿಳಿಸಿದೆ.

‘ಜೂನ್ 12, 13 ಮತ್ತು 14ರಂದು ‍ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇಸ್ತಾಂಬುಲ್‌ನ ಅತಾತುರ್ಕ್ ಒಲಿಂಪಿಕ್ ಕ್ರೀಡಾಂಗಣದಲ್ಲಿ ಮೇ 30ರಂದು ನಡೆಯಬೇಕಾಗಿದ್ದ ಚಾಂಪಿಯನ್ಸ್ ಲೀಗ್ ಫೈನಲ್‌ ಆಗಸ್ಟ್‌ನಲ್ಲಿಆಯೋಜಿಸಲು ಪ್ರಯತ್ನಿಸಲಾಗುವುದು’ ಎಂದು ಟರ್ಕಿ ಫುಟ್‌ಬಾಲ್ ಫೆಡರೇಷನ್ ಮುಖ್ಯಸ್ಥ ನಿಹತ್ ಒಸ್ಡೆಮಿರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT