ADVERTISEMENT

ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿಗೆ ಮಹಿಳಾ ರೆಫರಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 11:19 IST
Last Updated 14 ಸೆಪ್ಟೆಂಬರ್ 2023, 11:19 IST
<div class="paragraphs"><p>ಫುಟ್‌ಬಾಲ್‌ </p></div>

ಫುಟ್‌ಬಾಲ್‌

   

ಕ್ವಾಲಾಲಂಪುರ (ಎಎಫ್‌ಪಿ): ಜಪಾನ್‌ನ ಯೊಶಿಮಿ ಯಮಶಿಟ ಒಳಗೊಂಡಂತೆ ನಾಲ್ವರು ಮಹಿಳಾ ರೆಫರಿಗಳು ಮುಂದಿನ ವರ್ಷ ಕತಾರ್‌ನಲ್ಲಿ ನಡೆಯಲಿರುವ ಪುರುಷರ ಏಷ್ಯಾ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಯಮಶಿಟ ಅವರು 2022 ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ರೆಫರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ADVERTISEMENT

‘ಏಷ್ಯಾ ಕಪ್‌ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಡಿಯೊ ಅಸಿಸ್ಟೆಂಟ್‌ ರೆಫರಿ (ವಿಎಆರ್‌) ವ್ಯವಸ್ಥೆ ಕೂಡಾ ಏಷ್ಯಾಕಪ್‌ನಲ್ಲಿ ಪದಾರ್ಪಣೆ ಮಾಡಲಿದೆ’ ಎಂದು ಹೇಳಿದೆ.

ಮುಂದಿನ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಪಾಲ್ಗೊಳ್ಳಲಿವೆ. ಹಾಲಿ ಚಾಂಪಿಯನ್‌ ಆಗಿರುವ ಆತಿಥೇಯ ಕತಾರ್‌, ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿದ್ದ ಜಪಾನ್‌ ಮತ್ತು ದಕ್ಷಿಣ ಕೊರಿಯಾ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.