ADVERTISEMENT

ಫಿನಿಷರ್ಸ್‌ ಟಿ ಶರ್ಟ್‌ ಬಿಡುಗಡೆ

ಇದೇ 19ರಂದು ನಡೆಯಲಿರುವ ವಿಶ್ವ ಟೆನ್ ಕೆ ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:36 IST
Last Updated 7 ಮೇ 2019, 19:36 IST
ವಿಶ್ವ ಟೆನ್ ಕೆ ಓಟದಲ್ಲಿ ಪಾಲ್ಗೊಳ್ಳುವ ಓಟಗಾರ್ತಿಯರ ಜೊತೆ ಅಥ್ಲೀಟ್ ಜಿನ್ಸನ್‌ ಜಾನ್ಸನ್‌ –ಪ್ರಜಾವಾಣಿ ಚಿತ್ರ
ವಿಶ್ವ ಟೆನ್ ಕೆ ಓಟದಲ್ಲಿ ಪಾಲ್ಗೊಳ್ಳುವ ಓಟಗಾರ್ತಿಯರ ಜೊತೆ ಅಥ್ಲೀಟ್ ಜಿನ್ಸನ್‌ ಜಾನ್ಸನ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇದೇ 19ರಂದು ನಡೆಯಲಿರುವ ವಿಶ್ವ ಟೆನ್ ಕೆ ಓಟದ ಸ್ಪರ್ಧೆಯ ‘ಫಿನಿಷರ್ಸ್‌ ಟೀ ಶರ್ಟ್‌’ ಮಂಗಳವಾರ ಬಿಡುಗಡೆ ಮಾಡಲಾಯಿತು.

ರಾಷ್ಟ್ರ ಮತ್ತು ಅಂತರರರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳು ಪಾಲ್ಗೊಳ್ಳುವ ಸ್ಪರ್ಧೆಯಲ್ಲಿ ನೀಡಲಾಗುವ ಟಿ ಶರ್ಟ್‌ಗಳನ್ನು ದೂರ ಮತ್ತು ಮಧ್ಯಮ ದೂರ ಅಂತರದ ಓಟಗಾರ ಜಿನ್ಸನ್ ಜಾನ್ಸನ್‌ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟಕ ಕಂಪನಿ ಆಸಿಕ್‌ನ ವ್ಯವಸ್ಥಾಪಕ ನಿರ್ದೇಶಖ ರಜತ್ ಖುರಾನ್‌ ‘ಆಸಿಕ್ಸ್ ಓಟಕ್ಕೊಂದು ಅನ್ವರ್ಥ ನಾಮವಾಗಿದ್ದು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.

ADVERTISEMENT

ಈ ಬಾರಿ 10ಕೆ ಓಟದಲ್ಲಿ ಪಾಲ್ಗೊಳ್ಳುವ ತಲಾ 500 ಮಹಿಳೆಯರು ಹಾಗೂ ಪುರುಷರಿಗೆ ಫಿನಿಷರ್ಸ್‌ ಟೀ ಶರ್ಟ್ ಪುರಸ್ಕಾರವಾಗಿ ನೀಡಲಾಗುವುದು’ ಎಂದು ತಿಳಿಸಿದರು.

ಪ್ರೋಕಾಂ ಇಂಟರ್‍ನ್ಯಾಷನಲ್‍ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ‘ಫಿನಿಷರ್ಸ್ ಟಿ ಶರ್ಟ್ ಓಟಗಾರನೊಬ್ಬ ತನ್ನ ಸಾಧನೆಗೆ ಪಡೆಯುವ ಗೌರವವಾಗಿದ್ದು ಅದರಿಂದ ಅವರಿಗೆ ನೈತಿಕ ಧೈರ್ಯ ಸಿಕ್ಕಂತಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.