ADVERTISEMENT

ಕಬಡ್ಡಿ: ಪ್ಯಾಂಥರ್ಸ್‌ ಶುಭಾರಂಭ

ಪಿಟಿಐ
Published 14 ಡಿಸೆಂಬರ್ 2018, 17:09 IST
Last Updated 14 ಡಿಸೆಂಬರ್ 2018, 17:09 IST
ಜೈಪುರ ಪಿಂಕ್‌ ಪ್ಯಾಂಥರ್ಸ್ ಅಂಗಣದಲ್ಲಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದ ಪುಣೇರಿ ಪಲ್ಟನ್ ಆಟಗಾರ
ಜೈಪುರ ಪಿಂಕ್‌ ಪ್ಯಾಂಥರ್ಸ್ ಅಂಗಣದಲ್ಲಿ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದ ಪುಣೇರಿ ಪಲ್ಟನ್ ಆಟಗಾರ   

ಪಂಚಕುಲಾ: ಪುಣೇರಿ ಪಲ್ಟನ್‌ ವಿರುದ್ಧ 36–23ರಿಂದ ಜಯ ಗಳಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನ
ತವರಿನ ಲೆಗ್‌ನಲ್ಲಿ ಶುಭಾರಂಭ ಮಾಡಿತು. ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಎಂಟು ರೇಡಿಂಗ್‌ ಪಾಯಿಂಟ್ ಗಳಿಸಿದ ದೀಪಕ್ ಹೂಡಾ ಮತ್ತು ಎಂಟು ಟ್ಯಾಕಲ್ ಪಾಯಿಂಟ್ ಗಳಿಸಿದ ನವೀನ್ ಸಿದ್ದಗವಳೆ ಆತಿಥೇಯರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪುಣೆ ಪರ ಜಿ.ಬಿ.ಮೋರೆ ಮಿಂಚಿದರು. ಅವರು ಐದು ರೇಡಿಂಗ್ ಪಾಯಿಂಟ್ ಕಲೆ
ಹಾಕಿದರು.

ಪ್ಲೇ ಆಫ್ ಹಂತಕ್ಕೇರುವ ಅವಕಾಶ ಕಳೆದುಕೊಂಡಿರುವ ಪುಣೇರಿ ಆರಂಭದಲ್ಲಿ ಸ್ವಲ್ಪ ಪ್ರತಿರೋಧ ತೋರಿತು. ಆದರೆ 10 ನಿಮಿಷಗಳ ನಂತರ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು.

ಪುಣೇರಿ ತಂಡವನ್ನು ಆಲ್‌ಔಟ್ ಮಾಡಿ 12–7ರಿಂದ ಮುನ್ನಡೆದ ಜೈಪುರ ನಂತರದ 10 ನಿಮಿಷಗಳಲ್ಲಿ ಕೇವಲ ಎರಡು ಪಾಯಿಂಟ್ ಬಿಟ್ಟುಕೊಟ್ಟಿತು.

ADVERTISEMENT

ಸಂದೀಪ್ ನರ್ವಾಲ್ ಅವರ ಅಮೋಘ ರೇಡ್ ಮೂಲಕ ದ್ವಿತೀಯಾರ್ಧದಲ್ಲಿ ಪಾಯಿಂಟ್ ಗಳಿಸಲು ಆರಂಭಿಸಿದ ಜೈಪುರ ನಂತರ ಹಿಂತಿರುಗಿ ನೋಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.