ADVERTISEMENT

ಹಾಕಿ: ಸಂಭವನಿಯರ ತಂಡದಲ್ಲಿ ಸುನಿಲ್

ಪಿಟಿಐ
Published 1 ಸೆಪ್ಟೆಂಬರ್ 2019, 4:59 IST
Last Updated 1 ಸೆಪ್ಟೆಂಬರ್ 2019, 4:59 IST
ಎಸ್. ವಿ. ಸುನಿಲ್
ಎಸ್. ವಿ. ಸುನಿಲ್   

ನವದೆಹಲಿ: ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯಲಿರುವ ಭಾರತ ಹಾಕಿ ತಂಡದ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ 33 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಕನ್ನಡಿಗ ಸುನಿಲ್ ಕೂಡ ಅದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಸೆ.2 ರಿಂದ ಶಿಬಿರವನ್ನು ಆರಂಭವಾಗಲಿದೆ. ಮುಖ್ಯ ಕೋಚ್ ಗ್ರಹಾಂ ರೀಡ್ ಮಾರ್ಗದರ್ಶನ ನೀಡಲಿದ್ದಾರೆ. ಇದೇ ತಿಂಗಳು ತಂಡವು ಬೆಲ್ಜಿಯಂ ಪ್ರವಾಸ ಕೈಗೊಳ್ಳಲಿದೆ. ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿಯೂ ತಂಡವು ಆಡಲಿದೆ.

ತಂಡ: ಗೋಲ್‌ಕೀಪರ್ಸ್‌: ಪಿ.ಆರ್. ಶ್ರೀಜೇಶ್, ಸೂರಜ್ ಕರ್ಕೆರಾ, ಕಿಶನ್ ಬಹಾದ್ದೂರ್ ಪಾಠಕ್. ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ಬಿರೇಂದ್ರ ಲಕ್ರಾ, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ವರುಣಕುಮಾರ್, ರೂಪಿಂದರ್ ಪಾಲ್ ಸಿಂಗ್, ಗುರಿಂದರ್ ಸಿಂಗ್, ಕೊಥಾಜಿತ್ ಸಿಂಗ್ ಖಡಂಗಬಮ್, ನೀಲಂ ಸಂಜೀಪ್ ಸೆಸ್, ಜರ್ಮನಪ್ರೀತ್ ಸಿಂಗ್, ದಿಸ್ಪನ್ ಟಿರ್ಕಿ. ಮಿಡ್‌ಫೀಲ್ಡರ್ಸ್: ಮನಪ್ರೀತ್ ಸಿಂಗ್, ಸುಮಿತ್ ನೀಲಕಂಠ ಶರ್ಮಾ, ಜಸ್ಕರಣ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಶಿಶ್ ಕುಮಾರ್ ಟೊಪನೊ, ಸಯ್ಯದ್ ನಿಯಾಜ್ ರಹೀಂ ರಾಜಕುಮಾರ್ ಪಾಲ್. ಫಾರ್ವರ್ಡ್ಸ್:ಮನದೀಪ್ ಸಿಂಗ್, ಆಕಾಶದೀಪ್ ಸಿಂಗ್, ಶಿಲಾನಂದ ಲಕ್ರಾ, ಗುರಸಾಹಿಬ್ಜೀತ್ ಸಿಂಗ್, ಸಿಮ್ರನ್‌ಜೀತ್ ಸಿಂಗ್, ಎಸ್‌.ವಿ. ಸುನಿಲ್, ಗುರ್ಜಂತ್ ಸಿಂಗ್, ರಮಣದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.