ADVERTISEMENT

Karting Champion: 10 ವರ್ಷದ ರೇಸರ್‌ ಅತಿಕಾ ದಾಖಲೆ

ಪಿಟಿಐ
Published 13 ಅಕ್ಟೋಬರ್ 2025, 14:42 IST
Last Updated 13 ಅಕ್ಟೋಬರ್ 2025, 14:42 IST
<div class="paragraphs"><p>ಪ್ರಶಸ್ತಿಯೊಂದಿಗೆ&nbsp;ಅತಿಕಾ ಮಿರ್ </p></div>

ಪ್ರಶಸ್ತಿಯೊಂದಿಗೆ ಅತಿಕಾ ಮಿರ್

   

–ಪಿಟಿಐ ಚಿತ್ರ

ಅಲ್ ಐನ್ (ಯುಎಇ): ‌‌ಭಾರತದ ಅತಿಕಾ ಮಿರ್ ಅವರು ಇಲ್ಲಿ ನಡೆದ ಆರ್‌ಎಂಸಿ ಯುಎಇ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನ ಮಿನಿಮ್ಯಾಕ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ರೇಸರ್‌ ಎಂಬ ಹಿರಿಮೆಗೆ ಪಾತ್ರವಾದರು. 

ADVERTISEMENT

ಶ್ರೀನಗರದ 10 ವರ್ಷದ ಅತಿಕಾ ಅವರು ಭಾನುವಾರ ಅಲ್ ಐನ್ ರೇಸ್‌ವೇಯಲ್ಲಿ ನಾಲ್ಕು ಸೆಕೆಂಡುಗಳ ಅಂತರದಿಂದಗೆಲುವು ಸಾಧಿಸಿದರು. ಪುರುಷರು ಸೇರಿದಂತೆ 15 ದೇಶಗಳ ರೇಸರ್‌ಗಳಿದ್ದ ಸ್ಪರ್ಧೆಯ ನಾಲ್ಕನೇ ಲ್ಯಾಪ್‌ನಲ್ಲಿ ಅತಿಕಾ ಮುನ್ನಡೆ ಸಾಧಿಸಿದರು.  

‘ಮೊದಲ ನಾಲ್ಕು ಲ್ಯಾಪ್ಸ್‌ಗಳು ನನ್ನ ಪಾಲಿಗೆ ಕಠಿಣವಾಗಿತ್ತು. ಆದರೆ, ನಾನು ಹೋರಾಟವನ್ನು ಸಡಿಲಿಸದೆ ವೇಗವನ್ನು ಹೆಚ್ಚಿಸುತ್ತಾ ಮುನ್ನುಗ್ಗಿದ್ದರಿಂದ ಗೆಲುವು ಸಾಧ್ಯವಾಯಿತು. ಮಾರ್ಕ್ ಬೈನ್ಸ್ ನೇತೃತ್ವದ ಆಕ್ಸೆಲ್ ಜಿಪಿ ತಂಡ ಮತ್ತು ನನ್ನ ಮೆಕ್ಯಾನಿಕ್ ಸಿಆರ್‌ಎ ಅವರಿಗೆ ಧನ್ಯವಾದಗಳು’ ಎಂದು ಜಮ್ಮು ಕಾಶ್ಮೀರದ ಅತಿಕಾ ಪ್ರತಿಕ್ರಿಯಿಸಿದರು.

ಕಳೆದ ವಾರಾಂತ್ಯದಲ್ಲಿ ಅತಿಕಾ ಕೈಗೆ ಗಾಯಗೊಂಡರೂ, ಯುಎಇ ಐಎಎಂಇ ಸರಣಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.