ADVERTISEMENT

ವಿಶೇಷ ಒಲಿಂಪಿಕ್ಸ್‌ನಲ್ಲಿ 125 ಮಂದಿ ಭಾಗಿ

ಕಣ್ಣೆದುರು ಮಿಸೈಲ್‌, ಬಾಂಬ್‌ ಮನದಲ್ಲಿ ಸಾಧನೆಯ ಕನಸು

ಪಿಟಿಐ
Published 18 ಮಾರ್ಚ್ 2019, 19:15 IST
Last Updated 18 ಮಾರ್ಚ್ 2019, 19:15 IST

ಅಬುಧಾಬಿ: ಮಿಸೈಲ್‌ ದಾಳಿಯ ಆತಂಕದಲ್ಲಿ ಬದುಕುವ, ಬಾಂಬ್‌ಗಳು ಬೀಳುವುದನ್ನು ಕಣ್ಣೆದುರೇ ಕಾಣುವ, ಸಾವು–ನೋವಿಗೆ ನಿತ್ಯವೂ ಸಾಕ್ಷಿಯಾಗುವ ಸಿರಿಯಾದಲ್ಲಿ ಈಗ ಕ್ರೀಡೆ ಜೀವ ಕಳೆ ತಳೆದಿದೆ.

ಕ್ರೀಡಾ ತರಬೇತಿ ಮತ್ತು ಸಾಧನೆಗೆ ಪೂರಕವಲ್ಲದ ದೇಶದಲ್ಲಿ ಅಂಗವಿಕಲರು ಕೂಡ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಸಾಮರ್ಥ್ಯ ಮೆರೆಯುತ್ತಿದ್ದಾರೆ. ವಿಶೇಷ ಒಲಿಂಪಿಕ್ಸ್‌ನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

‘ಕೆಲವು ವರ್ಷಗಳಿಂದ ನಮ್ಮಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ತರಬೇತಿ ನಡೆಯುವ ಪ್ರದೇಶಗಳಲ್ಲೇ ಮಿಸೈಲ್‌ಗಳು ಮತ್ತು ಬಾಂಬ್‌ಗಳನ್ನು ಕಂಡಿದ್ದೇವೆ ‍ಪ್ರತಿಕೂಲ ಪರಿಸ್ಥಿತಿಯಲ್ಲೇ ಅಭ್ಯಾಸ ಮಾಡುತ್ತೇವೆ’ ಎಂದು ತಾಂತ್ರಿಕ ಅಧಿಕಾರಿ ತಿಳಿಸಿದರು.

ADVERTISEMENT

‘ಅಥ್ಲೀಟ್‌ಗಳು ಟ್ರ್ಯಾಕ್‌ನಲ್ಲೇ ಮಿಸೈಲ್‌ಗಳು ಬೀಳುವುದನ್ನು ಕಂಡಿದ್ದಾರೆ. ಕಣ್ಣ ಮುಂದೆಯೇ ಮನೆಗಳು ನಾಶ ಆಗಿರುವುದಕ್ಕೆ ಸಾಕ್ಷಿಯಾಗಿದ್ದಾರೆ. ಈ ಕ್ರೀಡಾಪಟುಗಳು ಎಲ್ಲರಿಗೂ ಪ್ರೇರಣೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.