ADVERTISEMENT

2011 ವಿಶ್ವಕಪ್: ಸಚಿನ್ ಸಿಕ್ಸರ್; ವೀರೂ–ವಿರಾಟ್ ದರ್ಬಾರ್!

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:49 IST
Last Updated 22 ಮೇ 2019, 19:49 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಐರ್ಲೆಂಡ್ ಎದುರು ನಡೆದಿದ್ದ 2011ರ ವಿಶ್ವಕಪ್ ಟೂರ್ನಿಯ ಪಂದ್ಯದ ಮುನ್ನಾದಿನದಂದು ನಡೆದ ಯೋಗ ತರಬೇತಿಯಲ್ಲಿ ಭಾಗವಹಿಸಿದ್ದ ಆಟಗಾರರಾದ ಮುನಾಫ್ ಪಟೇಲ್, ಮನೋಜ್ (ಯೋಗ ತರಬೇತುದಾರ), ವೀರೇಂದ್ರ ಸೆಹ್ವಾಗ್, ಶ್ರೀಶಾಂತ್, ವಿರಾಟ್ ಕೊಹ್ಲಿ, ಹರಭಜನ್ ಸಿಂಗ್, ಪೀಯೂಷ್ ಚಾವ್ಲಾ, ಸುರೇಶ್ ರೈನಾ, ಮಹೇಂದ್ರಸಿಂಗ್ ಧೋನಿ, ಎರಿಕ್ ಸೈಮನ್ (ಬೌಲಿಂಗ್ ಕೋಚ್) – ಪ್ರಜಾವಾಣಿ ಸಂಗ್ರಹ.  
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಐರ್ಲೆಂಡ್ ಎದುರು ನಡೆದಿದ್ದ 2011ರ ವಿಶ್ವಕಪ್ ಟೂರ್ನಿಯ ಪಂದ್ಯದ ಮುನ್ನಾದಿನದಂದು ನಡೆದ ಯೋಗ ತರಬೇತಿಯಲ್ಲಿ ಭಾಗವಹಿಸಿದ್ದ ಆಟಗಾರರಾದ ಮುನಾಫ್ ಪಟೇಲ್, ಮನೋಜ್ (ಯೋಗ ತರಬೇತುದಾರ), ವೀರೇಂದ್ರ ಸೆಹ್ವಾಗ್, ಶ್ರೀಶಾಂತ್, ವಿರಾಟ್ ಕೊಹ್ಲಿ, ಹರಭಜನ್ ಸಿಂಗ್, ಪೀಯೂಷ್ ಚಾವ್ಲಾ, ಸುರೇಶ್ ರೈನಾ, ಮಹೇಂದ್ರಸಿಂಗ್ ಧೋನಿ, ಎರಿಕ್ ಸೈಮನ್ (ಬೌಲಿಂಗ್ ಕೋಚ್) – ಪ್ರಜಾವಾಣಿ ಸಂಗ್ರಹ.     

ಭಾರತದ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳ ಕಿರೀಟಕ್ಕೆ ಮತ್ತೊಂದು ರತ್ನ ಸೇರಿದ ಹರ್ಷ. ಆರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಭಾರತದ ಆಟಗಾರ ಮತ್ತು ವಿಶ್ವದ ಎರಡನೇ ಆಟಗಾರನಾದರು. ಪಾಕಿಸ್ತಾನ ತಂಡದ ಜಾವೇದ್ ಮಿಯಾಂದಾದ್ (1975, 1979, 1983, 1987, 1992 ಮತ್ತು 1996) ಅವರ ದಾಖಲೆಯನ್ನು ಸರಿಗಟ್ಟಿದರು. ಸಚಿನ್ 1992, 1996, 1999, 2003, 2007 ಮತ್ತು 2011ರಲ್ಲಿ ಆಡಿದ ಸಾಧನೆ ಮಾಡಿದರು. ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಆಯೋಜನೆಯಲ್ಲಿ ಸಹಭಾಗಿಯಾಗಿದ್ದ ಬಾಂಗ್ಲಾದೇಶವು ಉದ್ಘಾಟನೆ ಸಮಾರಂಭ ಮತ್ತು ಪಂದ್ಯವನ್ನು ಸಂಘಟಿಸಿ ಮೆಚ್ಚುಗೆಗೆ ಪಾತ್ರವಾಯಿತು.

***

* ಫೆಬ್ರುವರಿ 19ರಂದು ಢಾಕಾದ ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾ ತಂಡಗಳು ಮುಖಾಮುಖಿಯಾದವು. ಪಂದ್ಯಕ್ಕೂ ಮುನ್ನ ಅಭೂತಪೂರ್ವ ಉದ್ಘಾಟನೆ ಸಮಾರಂಭ ಎಲ್ಲರ ಮನದಲ್ಲಿ ಅಚ್ಚೊತ್ತಿತ್ತು. ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ADVERTISEMENT

*ಆರಂಭಿಕ ಜೋಡಿ ಸಚಿನ್ ತೆಂಡೂಲ್ಕರ್–ವೀರೇಂದ್ರ ಸೆಹ್ವಾಗ್ ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ (10.5 ಓವರ್‌) ಕಲೆಹಾಕಿದರು. ಅದರಲ್ಲೂ ವೀರೂ ಆರ್ಭಟ ಮೇರೆ ಮೀರಿತ್ತು. ಸಚಿನ್(28) ರನ್‌ಔಟ್ ಆದರು. ಕ್ರೀಸ್‌ಗೆ ಬಂದ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ (39 ರನ್) ಅವರು ವೀರೂ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 83 ರನ್‌ಗಳನ್ನು ಪೇರಿಸಿದರು. ಗಂಭೀರ್ ಔಟಾದಾಗ ಬಾಂಗ್ಲಾ ಆಟಗಾರರು ಸಂಭ್ರಮಿಸಿದರು. ನಂತರ ಆತಿಥೆಯರಿಗೆ ಸಂತಸಪಡುವ ಅವಕಾಶ ಸಿಗಲಿಲ್ಲ!

* ಸಿಡಿಲಮರಿ ವೀರೂ ಜೊತೆಗೂಡಿದ ವಿರಾಟ್ ಕೊಹ್ಲಿ ಗುಡುಗಿದರು. ಇವರಿಬ್ಬರ ಜೊತೆಯಾಟದ ಮಿಂಚಿನಾಟ ಕಣ್ಣು ಕೋರೈಸಿತು. ದ್ವಿಶತಕದತ್ತ ಹೆಜ್ಜೆ ಹಾಕಿದ್ದ ವೀರೂ (175; 140ಎಸೆತ, 14ಬೌಂಡರಿ, 5ಸಿಕ್ಸರ್) ಅಬ್ಬರಕ್ಕೆ ಬೌಲರ್‌ಗಳು ಬಸವಳಿದರು. ಅದರೆ ಅವರು 48ನೇ ಓವರ್‌ನಲ್ಲಿ ಔಟಾದರು.

* ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಆಡಿದ ವಿರಾಟ್ ಕೂಡ ಶತಕ (ಅಜೇಯ 100; 83ಎಸೆತ, 8ಬೌಂಡರಿ, 2ಸಿಕ್ಸರ್) ಬಾರಿಸಿದರು.

* ಭಾರತ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 370 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡದ ಇಮಾಮ್ ಇಕ್ಬಾಲ್ (70 ರನ್), ಶಕೀಬ್ ಅಲ್ ಹಸನ್ (55 ರನ್) ಅರ್ಧಶತಕ ಹೊಡೆದರು. ಭಾರತದ ಮಧ್ಯಮವೇಗಿ ಮುನಾಫ್ ಪಟೇಲ್ ನಾಲ್ಕು ವಿಕೆಟ್ ಗಳಿಸಿದರು. 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 283 ರನ್‌ಗಳನ್ನು ಗಳಿಸಿತು. 87 ರನ್‌ಗಳಿಂದ ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.