ADVERTISEMENT

ಜರ್ಮನ್ ಓಪನ್‌: ಮುಖ್ಯಸುತ್ತಿಗೆ ಆಕರ್ಷಿ ಕಶ್ಯಪ್‌

ಪಿಟಿಐ
Published 24 ಫೆಬ್ರುವರಿ 2026, 15:52 IST
Last Updated 24 ಫೆಬ್ರುವರಿ 2026, 15:52 IST
<div class="paragraphs"><p>ಆಕರ್ಷಿ ಕಶ್ಯಪ್‌</p></div>

ಆಕರ್ಷಿ ಕಶ್ಯಪ್‌

   

ಮುಲ್ಹೇಮ್ ಆನ್ ಡೆರ್ ರುಹುವಾ (ಜರ್ಮನಿ): ಭಾರತದ ಉದಯೋನ್ಮುಖ ಆಟಗಾರ್ತಿ ಆಕರ್ಷಿ ಕಶ್ಯಪ್ ಅವರು ಮಂಗಳವಾರ ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ಮುಖ್ಯ ಸುತ್ತು ಪ್ರವೇಶಿಸಿದರು.

ವಿಶ್ವದ 62ನೇ ಕ್ರಮಾಂಕದ ಕಶ್ಯಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ 21-10, 21-15ರಿಂದ ತೈವಾನ್‌ನ ಲೀ ಯು-ಹ್ಸುವಾನ್ ಅವರನ್ನು ಮಣಿಸಿದರು. ಅವರು ಮುಂದಿನ ಪಂದ್ಯದಲ್ಲಿ ತೈವಾನ್‌ನ ಮತ್ತೊಬ್ಬ ಆಟಗಾರ್ತಿ ಹುವಾಂಗ್ ಯು-ಹ್ಸುನ್ ಅವರನ್ನು ಎದುರಿಸಲಿದ್ದಾರೆ.

ADVERTISEMENT

₹2.27 ಕೋಟಿ ಬಹುಮಾನ ಮೊತ್ತದ ಈ ಟೂರ್ನಿಯಲ್ಲಿ ಅನುಭವಿ ಕಿದಂಬಿ ಶ್ರೀಕಾಂತ್ ಮತ್ತು ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ತನ್ವಿ ಶರ್ಮಾ ಅವರು ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.