ADVERTISEMENT

ಆಕಾಶ್‌, ಯಶಸ್ವಿನಿಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 14:39 IST
Last Updated 29 ನವೆಂಬರ್ 2020, 14:39 IST
ಅನರ್ಘ್ಯಾ ಮಂಜುನಾಥ್‌
ಅನರ್ಘ್ಯಾ ಮಂಜುನಾಥ್‌   

ಬೆಂಗಳೂರು: ಅಮೋಘ ಆಟವಾಡಿದ ಆಕಾಶ್‌ ಕೆ.ಜೆ. ಹಾಗೂ ಯಶಸ್ವಿನಿ ಘೋರ್ಪಡೆ ಅವರು ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಆಕಾಶ್‌ ಅವರು 4–11, 11–9, 5–11, 8–11, 12–10, 11–4, 13–11ರಿಂದ ಶ್ರೇಯಲ್‌ ತೆಲಂಗ್‌ ಅವರನ್ನು ಮಣಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಆಕಾಶ್‌ 11–3, 11–3, 11-6, 11-9ರಿಂದ ಕೌಸ್ತುಭ್‌ ಕುಲಕರ್ಣಿ ಎದುರು ಹಾಗೂ ಶ್ರೇಯಸ್‌ ತೆಲಂಗ್‌ 11–7, 11–6, 11–9, 8–11, 11–6ರಿಂದ ರಕ್ಷಿತ್‌ ಬಾರಿಗಿಡದ ಅವರನ್ನು ಪರಾಭವಗೊಳಿಸಿದರು.

ADVERTISEMENT

ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿ ಪೈಪೋಟಿಯಿಂದ ಕೂಡಿತ್ತು. ಯಶಸ್ವಿನಿ ಅವರು 12–14, 4–11, 13–11, 14–12, 11–7, 11–8ರಿಂದ ಖುಷಿ ವಿ. ಅವರನ್ನು ಮಣಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಯಶಸ್ವಿನಿ 11–7, 11–8, 11–4, 12–10ರಿಂದ ಸಂಯುಕ್ತಾ ಎ. ಅವರನ್ನು ಸೋಲಿಸಿದರೆ, ಖುಷಿ ಅವರು 5–11, 11–9, 9–11, 11–5, 11–9, 11–2ರಿಂದ ಮರಿಯಾ ರೋನಿ ವಿರುದ್ಧ ಗೆದ್ದರು.

‌ಅನರ್ಘ್ಯಾಗೆ ಪ್ರಶಸ್ತಿ ಡಬಲ್‌: ಟೂರ್ನಿಯಲ್ಲಿ ಶನಿವಾರ ಯೂತ್‌ ಹಾಗೂ ಜೂನಿಯರ್‌ ಬಾಲಕಿಯರ ವಿಭಾಗದ ಪ್ರಶಸ್ತಿಗಳನ್ನು ಅನರ್ಘ್ಯಾ ಮಂಜುನಾಥ್ ತಮ್ಮದಾಗಿಸಿಕೊಂಡರು.

ಎರಡು ವಿಭಾಗದ ಫೈನಲ್‌ ಪಂದ್ಯಗಳಲ್ಲಿ ಅನರ್ಘ್ಯಾ ಅವರು ಯಶಸ್ವಿನಿ ಘೋರ್ಪಡೆ ಅವರನ್ನು ಮಣಿಸಿದರು. ಜೂನಿಯರ್ ವಿಭಾಗದಲ್ಲಿ 11–9, 6–11, 11–7, 11–9, 11–7ರಿಂದ ಹಾಗೂ ಯೂತ್‌ ವಿಭಾಗದಲ್ಲಿ 11–7, 12–10, 7–11, 12–10, 4–11, 11–8ರಿಂದ ಅವರಿಗೆ ಜಯ ಒಲಿಯಿತು.

ಜೂನಿಯರ್‌ ಬಾಲಕರ ವಿಭಾಗದಲ್ಲಿ ಪಿ.ವಿ.ಶ್ರೀಕಾಂತ್ ಕಶ್ಯಪ್‌ ಹಾಗೂ ಯೂತ್‌ ವಿಭಾಗದಲ್ಲಿ ಸಮರ್ಥ್‌ ಕುರಡಿಕೇರಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಜೂನಿಯರ್‌ ಬಾಲಕರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್‌ ಕಶ್ಯಪ್‌ 8-11, 11-9, 9-11, 15- 13, 11-4, 11-9ರಿಂದ ಸಮ್ಯಕ್‌ ಕಶ್ಯಪ್‌ ಎದುರು ಜಯಿಸಿದರು.

ಯೂತ್‌ ಫೈನಲ್‌ನಲ್ಲಿ ಸಮರ್ಥ್‌ 11-9, 11-7, 12-10, 10-12, 9-11, 11-1ರಿಂದ ಶ್ರೀಕಾಂತ್‌ ಕಶ್ಯಪ್‌ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.