ನವದೆಹಲಿ: 2026ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಿರಿಯ ಕ್ರೀಡಾಪಟು ಅಭಿನವ್ ಬಿಂದ್ರಾ ಅವರು ಕ್ರೀಡಾ ಜ್ಯೋತಿ ಹಿಡಿದು ಸಾಗಲಿದ್ದಾರೆ.
ಇಟಲಿಯ ಮಿಲಾನ್ ಹಾಗೂ ಕೊರ್ಟಿನಾ ಡಿ ಅಂಪೆಝೊದಲ್ಲಿ ಫೆ. 6 ರಿಂದ ಫೆ. 22ರವರೆಗೆ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ.
'ಇಟಲಿಯಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಜ್ಯೋತಿಯನ್ನು ಹಿಡಿಯಲು ಆಯ್ಕೆಯಾಗಿದಕ್ಕೆ ನಿಜವಾಗಿಯೂ ವಿನಮ್ರನಾಗಿದ್ದೇನೆ. ಒಲಿಂಪಿಕ್ ಜ್ವಾಲೆಯು ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಅದು ಕನಸುಗಳು, ಪರಿಶ್ರಮ ಮತ್ತು ಒಗ್ಗಟ್ಟನ್ನು ಕ್ರೀಡೆಯಲ್ಲಿ ತರುವ ಸಂಕೇತವಾಗಿದೆ' ಎಂದು ಅಭಿನವ್ ಬಿಂದ್ರಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಭಿನವ್ ಬಿಂದ್ರಾ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.