ADVERTISEMENT

ಟೇಬಲ್‌ ಟೆನಿಸ್‌ ಟೂರ್ನಿ: ಅಭಿನವ್, ಸಹನಾಗೆ ಸಿಂಗಲ್ಸ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 20:48 IST
Last Updated 3 ಡಿಸೆಂಬರ್ 2025, 20:48 IST
(ಎಡದಿಂದ) ಪ್ರಶಸ್ತಿ ಪತ್ರದೊಂದಿಗೆ ಅಭಿನವ್‌ ಕೆ. ಮೂರ್ತಿ, ಸಹನಾ ಎಚ್‌. ಮೂರ್ತಿ ಹಾಗೂ ಆರ್ಣವ್‌ ಎನ್‌.
(ಎಡದಿಂದ) ಪ್ರಶಸ್ತಿ ಪತ್ರದೊಂದಿಗೆ ಅಭಿನವ್‌ ಕೆ. ಮೂರ್ತಿ, ಸಹನಾ ಎಚ್‌. ಮೂರ್ತಿ ಹಾಗೂ ಆರ್ಣವ್‌ ಎನ್‌.   

ಬೆಂಗಳೂರು: ಅಭಿನವ್ ಕೆ.ಮೂರ್ತಿ ಮತ್ತು ಸಹನಾ ಎಚ್‌.ಮೂರ್ತಿ ಅವರು ಬುಧವಾರ ಮುಕ್ತಾಯಗೊಂಡ 27ನೇ ಡಾ.ಎಂ.ಎಸ್‌.ರಾಮಯ್ಯ ಸ್ಮರಣಾರ್ಥ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಸಹನಾ ಮೂರ್ತಿ, ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 8–11, 11–6, 9–11, 10–12, 11–3, 11–6, 11–7 ರಿಂದ ಹಿಮಾನ್ಶಿ ಚೌಧರಿ ಅವರನ್ನು ಸೋಲಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ಹಿಮಾನ್ಶಿ 1–11, 16–14, 11–7, 11–6, 11–6 ರಿಂದ ವೇದಾಲಕ್ಷ್ಮಿ ಡಿ.ಕೆ. ಅವರನ್ನು, ಸಹನಾ ಮೂರ್ತಿ 11–8, 11–9, 11–5, 11–9 ರಿಂದ ಖುಷಿ ಅವರನ್ನು ಪರಾಭವಗೊಳಿಸಿದರು.

ADVERTISEMENT

ಪುರುಷರ ಸಿಂಗಲ್ಸ್‌ನಲ್ಲಿ ಅಭಿನವ್ 13–11, 11–7, 11–6, 5–11, 11–6 ರಿಂದ ಅಥರ್ವ ನವರಂಗೆ ವಿರುದ್ಧ ಗೆಲುವು ಸಾಧಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ಅಭಿನವ್ 8–11, 11–8, 9–11, 11–8, 11–4, 11–8 ರಿಂದ ಆರ್ಣವ್‌ ಎನ್‌. ಅವರನ್ನು, ಅಥರ್ವ 11–4, 11–6, 11–13, 11–7, 6–11, 11–9 ರಿಂದ ರಾಜು ಕುಂದು ಅವರನ್ನು ಸೋಲಿಸಿದ್ದರು.

ಹಿಮಾನ್ಶಿ, ಆರ್ಣವ್‌ಗೆ ಪ್ರಶಸ್ತಿ: ಮಹಿಳೆಯರ ಸಿಂಗಲ್ಸ್‌ನಲ್ಲಿ ರನ್ನರ್ಸ್‌ ಅಪ್‌ ಆದ ಹಿಮಾನ್ಶಿ ಅವರು 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಫೈನಲ್‌ ಹಣಾಹಣಿಯಲ್ಲಿ ಅವರು 11–9, 13–15, 11–9, 11–8, 9–11, 11–8 ರಿಂದ ಹಿಯಾ ಸಿಂಗ್‌ ವಿರುದ್ಧ ರೋಚಕ ಗೆಲುವು ಸಾಧಿಸಿದರು.

ನಾಲ್ಕರ ಘಟ್ಟದಲ್ಲಿ ಹಿಮಾನ್ಶಿ 13–11, 11–6, 10–12,  7–11, 11–5 ರಿಂದ ಕೈರಾ ಬಾಳಿಗಾ ವಿರುದ್ಧ ಹಾಗೂ ಹಿಯಾ 12–14, 11–8, 11–2, 6–11, 11–6 ರಿಂದ ರಾಶಿ ವಿ. ರಾವ್‌ ವಿರುದ್ಧ ಜಯ ಸಾಧಿಸಿದ್ದರು.

19 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಆರ್ಣವ‌್ ಅವರು 11–7, 11–5, 11–9, 10–12, 11–5 ರಿಂದ ಬಿ.ಆರ್‌.ಗೌತಮ್‌ ಅವರನ್ನು ಮಣಿಸಿ, ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಗೌರವ್‌ 11–7, 11–7, 11–6 ರಿಂದ ಎ.ಆರ್‌.ಶೆಟ್ಲೂರ್‌ ಅವರನ್ನು ಹಾಗೂ ಆರ್ಣವ್‌ 7–11, 11–5, 11–7, 16–14 ರಿಂದ ಆರ್ಯ ಎ.ಜೈನ್‌ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.