ADVERTISEMENT

ರಾಷ್ಟ್ರೀಯ ಕುಸ್ತಿ: ಪ್ರವೇಶ ಕಳುಹಿಸಲು ನಿರ್ದೇಶನ 

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 18:35 IST
Last Updated 6 ಫೆಬ್ರುವರಿ 2024, 18:35 IST
<div class="paragraphs"><p> ಕುಸ್ತಿ ಪಂದ್ಯಾವಳಿ</p></div>

ಕುಸ್ತಿ ಪಂದ್ಯಾವಳಿ

   

ನವದೆಹಲಿ (ಪಿಟಿಐ): ಗ್ವಾಲಿಯರ್‌ನಲ್ಲಿ ನಡೆಯಲಿರುವ 15 ವರ್ಷದೊಳಗಿನ ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಪ್ರವೇಶ ಕಳುಹಿಸುವಂತೆ ಭಾರತ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ತಾತ್ಕಾಲಿಕ ಸಮಿತಿಯು ಎಲ್ಲಾ ರಾಜ್ಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಫೆಬ್ರವರಿ 11 ರಿಂದ 17 ರವರೆಗೆ ವಯೋಮಾನದ ಪಂದ್ಯಗಳು ನಡೆಯಲಿವೆ.

ADVERTISEMENT

ಫೆಬ್ರವರಿ 2 ರಿಂದ 5 ರವರೆಗೆ ಜೈಪುರದಲ್ಲಿ ನಡೆದ ಸೀನಿಯರ್‌ ಚಾಂಪಿಯನ್‌ಷಿಪ್‌ಗೆ ಪ್ರವೇಶ ಸಲ್ಲಿಸುವ ಬಗ್ಗೆ 2-3 ರಾಜ್ಯ ಸಂಸ್ಥೆಗಳೊಂದಿಗೆ ಸಮಸ್ಯೆಗಳನ್ನು ಎದುರಿಸಿದ್ದೇವೆ ಎಂದು ಅಡ್‌ಹಾಕ್ ಸಮಿತಿಯ ಮೂಲಗಳು ಸುದ್ದಿಸಂಸ್ಥೆಗೆ  ತಿಳಿಸಿವೆ.

 ‘ನಿರ್ದಿಷ್ಟ ಸಮಯದೊಳಗೆ ರಾಜ್ಯ ಕುಸ್ತಿ ಸಂಸ್ಥೆಯಿಂದ ಯಾವುದೇ ಪ್ರವೇಶವನ್ನು ಸ್ವೀಕರಿಸದಿದ್ದರೆ, ಮೂವರು ಸದಸ್ಯರ ಸಮಿತಿಯು ಆಯಾ ರಾಜ್ಯದ ಭಾಗವಹಿಸುವಿಕೆಗಾಗಿ ಪ್ರವೇಶ ಕಳುಹಿಸುತ್ತದೆ’ ಎಂದು ಸಮಿತಿಯು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ತಾತ್ಕಾಲಿಕ ಸಮಿತಿಯು ಆಯೋಜಿಸುವ ಚಾಂಪಿಯನ್‌ಷಿಪ್‌ ಮಾನ್ಯತೆ ಪಡೆದಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಎಲ್ಲಾ ಸರ್ಕಾರಿ ಪ್ರಯೋಜನಗಳು, ರಾಷ್ಟ್ರೀಯ ಶಿಬಿರಗಳು ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.