ADVERTISEMENT

ಪವರ್‌ಲಿಫ್ಟಿಂಗ್‌: ಆದರ್ಶ್ ವಿಶ್ವದಾಖಲೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 16:28 IST
Last Updated 9 ಜುಲೈ 2025, 16:28 IST
ಆದರ್ಶ್ ಬಿ. ಅತ್ತಾವರ್
ಆದರ್ಶ್ ಬಿ. ಅತ್ತಾವರ್   

ಬೆಂಗಳೂರು: ಮಂಗಳೂರಿನ ಆದರ್ಶ್ ಬಿ. ಅತ್ತಾವರ್ ಅವರು ಜಪಾನ್‌ನ ಹಿಮೋಜಿಯಲ್ಲಿ  ನಡೆಯುತ್ತಿರುವ ಏಷ್ಯಾ, ಆಫ್ರಿಕನ್‌, ಪೆಸಿಫಿಕ್‌ ಅಂತರರಾಷ್ಟ್ರೀಯ ಪವರ್‌ಲಿಫ್ಟಿಂಗ್‌ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ 276 ಕೆ.ಜಿ. ಭಾರ ಎತ್ತಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

59 ಕೆ.ಜಿ.ವಿಭಾಗದಲ್ಲಿ ಭಾಗವಹಿಸಿದ್ದ ಅವರು ಡೆಡ್‌ಲಿಫ್ಟ್‌ನಲ್ಲಿ ಫಿಲಿಪ್ಪೀನ್ಸ್‌ನ ರಮಿರೆಜ್‌ ರೆಗೀ ಹೆಸರಿನಲ್ಲಿದ್ದ (275.5 ಕೆ.ಜಿ.) ದಾಖಲೆಯನ್ನು ಮುರಿದರು.

ಭಾರತದ ವೇಟ್‌ಲಿಫ್ಟರ್‌ಗಳ ಪೈಕಿ ವಿಶ್ವದಾಖಲೆ ಸ್ಥಾಪಿಸಿದ ಎರಡನೆಯವರು ಎಂಬ ಗೌರವ  ಆದರ್ಶ್ ಅವರದಾಯಿತು. ಈ ಹಿಂದೆ, 1993ರಲ್ಲಿ ರೈಲ್ವೇಸ್‌ನ ಸಜೀವನ್ ಭಾಸ್ಕರನ್‌  ವಿಶ್ವದಾಖಲೆ ನಿರ್ಮಿಸಿದ್ದರು. ರೈಲ್ವೆ ಇಲಾಖೆ ಉದ್ಯೋಗಿಯಾಗಿರುವ ಅವರು ಬಾಲಾಂಜನೇಯ ಜಿಮ್ನಾಷಿಯಂ ಸದಸ್ಯರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.