ADVERTISEMENT

ವಿಶ್ವ ಕಾಂಟಿನೆಂಟರ್‌ ಟೂರ್‌: ಅರ್ಹತಾ ಮಟ್ಟ ನಿಗದಿ

ಪಿಟಿಐ
Published 17 ಜುಲೈ 2025, 15:55 IST
Last Updated 17 ಜುಲೈ 2025, 15:55 IST
   

ಭುವನೇಶ್ವರ: ಇದೇ ಆಗಸ್ಟ್‌ 10ರಂದು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ ಕೂಟಕ್ಕೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ ಗುರುವಾರ ಅರ್ಹತಾ ಮಟ್ಟ ಪ್ರಕಟಿಸಿದೆ.

ಕಾಂಟಿನೆಂಟರ್‌ ಟೂರ್‌ ಕೂಟವು ವಿಶ್ವ ಅಥ್ಲೆಟಿಕ್ಸ್ ವತಿಯಿಂದ ನಡೆಯುತ್ತಿದೆ. ಪ್ರತಿಷ್ಠಿತ ಡೈಮಂಡ್‌ ಲೀಗ್‌ ನಂತರ ಎರಡನೇ ಸ್ತರದ ಒಂದು ದಿನ ಕೂಟ ಇದಾಗಿದೆ. 

10 ರಾಷ್ಟ್ರಗಳ 150ಕ್ಕೂ ಹೆಚ್ಚು ಅಥ್ಲೀಟುಗಳು 20 ಸ್ಪರ್ಧೆಗಳಲ್ಲಿ  ಪಾಲ್ಗೊಳ್ಳಲಿದ್ದಾರೆ. ಭಾರತದ ಪ್ರಮುಖ ಅಥ್ಲೀಟುಗಳು ಕಣಕ್ಕಿಳಿಯಲಿದ್ದಾರೆ. ಆದರೆ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ ಅವರನ್ನುಳಿದು.

ADVERTISEMENT

ತುರ್ಕಮೆನಿಸ್ತಾನ, ಭೂತನ್, ಫಿಲಿಪೈನ್ಸ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ಇರಾಕ್‌, ವಿಯೆಟ್ನಾಂ, ಕ್ಯಾಮರೂನ್‌, ಶ್ರೀಲಂಕಾ, ಇರಾನ್‌, ಮಾಲ್ಡೀವ್ಸ್‌ನ ಅಥ್ಲೀಟುಗಳು ಕಂಚು ಗ್ರೇಡ್‌ನ ಈ ಕೂಟದಲ್ಲಿ ಭಾಗವಹಿಸುತ್ತಿವೆ.

 ಪುರುಷರ ಮತ್ತು ಮಹಿಳೆಯರ 100 ಮೀ. ಸ್ಪರ್ಧೆಗೆ ಕ್ರಮವಾಗಿ 10.60 ಸೆ. ಮತ್ತು 11.80 ಸೆ.ಗಳನ್ನು ನಿಗದಿಗೊಳಿಸಲಾಗಿದೆ.

ಪುರುಷರ ವಿಭಾಗದಲ್ಲಿ 100 ಮೀ. ಜೊತೆ 200 ಮೀ. ಓಟ (ನಿಗದಿಪಡಿಸಿರುವ ಅರ್ಹತಾ ಮಟ್ಟ: 21.30 ಸೆ.), 400 ಮೀ. ಓಟ (46.20 ಸೆ.), 800 ಮೀ. (1:48.50), 5000 ಮೀ. (14:10.00), ಲಾಂಗ್‌ಜಂಪ್‌ (7.80 ಮೀ.), ಟ್ರಿಪಲ್‌ ಜಂಪ್‌ (16.30 ಮೀ.), ಜಾವೆಲಿನ್‌ (75 ಮೀ.) ಸ್ಪರ್ಧೆಗಳು ನಡೆಯಲಿವೆ.

ಮಹಿಳೆಯರ ವಿಭಾಗದಲ್ಲಿ 200 ಮೀ. (ಅರ್ಹತಾ ಮಟ್ಟ 23.50 ಸೆ.), 400 ಮೀ. (23.50 ಸೆ.), 400 ಮೀ. (53.00) ಸೆ), 800 ಮೀ. (2:05.00), 1500 ಮೀ. (4:18.00), ಲಾಂಗ್‌ಜಂಪ್‌ (6.00 ಮೀ.), 100 ಮೀ. ಹರ್ಡಲ್ಸ್‌ (13.55 ಸೆ.) ಮತ್ತು ಜಾವೆಲಿನ್ (52 ಮಿ.) ಸ್ಪರ್ಧೆಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.