ADVERTISEMENT

ಯುಎಇ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರಿ: ಅಫ್ಸಲ್‌ ರಾಷ್ಟ್ರೀಯ ದಾಖಲೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 21:44 IST
Last Updated 9 ಮೇ 2025, 21:44 IST
ಮೊಹಮ್ಮದ್ ಅಫ್ಸಲ್
ಮೊಹಮ್ಮದ್ ಅಫ್ಸಲ್   

ದುಬೈ (ಪಿಟಿಐ): ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಮೊಹಮ್ಮದ್ ಅಫ್ಸಲ್ ಅವರು ಶುಕ್ರವಾರ ಇಲ್ಲಿ ನಡೆದ ಯುಎಇ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರಿ ಕೂಟದ 800 ಮೀಟರ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಕೇರಳದ 29 ವರ್ಷ ವಯಸ್ಸಿನ ಅಫ್ಸಲ್‌ ಅವರು 1 ನಿಮಿಷ 45.61 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಮೂಲಕ 2018ರಲ್ಲಿ ಜಿನ್ಸನ್ ಜಾನ್ಸನ್ (1ನಿ.45.65ಸೆ) ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

ದುಬೈ ಪೊಲೀಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಸ್ಪರ್ಧೆಯಲ್ಲಿ ಅಫ್ಸಲ್ ಬೆಳ್ಳಿ ಪದಕ ಗೆದ್ದರು. ಕೆನ್ಯಾದ ನಿಕೋಲಸ್ ಕಿಪ್ಲಾಗಟ್ (1 ನಿ.45.38ಸೆ) ಚಿನ್ನ ಗೆದ್ದರು.

ADVERTISEMENT

ಈ ಸಾಧನೆಯ ಹೊರತಾಗಿಯೂ ಅಫ್ಸಲ್‌ ಅವರಿಗೆ 2025ರ ವಿಶ್ವ ಚಾಂಪಿಯನ್‌ಷಿಪ್‌ನ ಅರ್ಹತೆ (1 ನಿ.44.50ಸೆ) ಸೆಕೆಂಡು ಪಡೆಯಲು ಸಾಧ್ಯವಾಗಲಿಲ್ಲ.

ರಾಷ್ಟ್ರೀಯ ದಾಖಲೆ ಹೊಂದಿರುವ ಅನಿಮೇಶ್ ಕುಜುರ್ ಅವರು 200 ಮೀ ಓಟವನ್ನು 20.45 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಚಿನ್ನ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.