ADVERTISEMENT

ಹಾಕಿ: ಎಸ್‌ಎಐಎಲ್‌ ಅಕಾಡೆಮಿಗೆ ಪ್ರಶಸ್ತಿ

ಪಿಟಿಐ
Published 10 ಡಿಸೆಂಬರ್ 2018, 20:15 IST
Last Updated 10 ಡಿಸೆಂಬರ್ 2018, 20:15 IST
ಟ್ವಿಟರ್‌ ಚಿತ್ರ.
ಟ್ವಿಟರ್‌ ಚಿತ್ರ.   

ನವದೆಹಲಿ: ಭಾರತ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಹಾಕಿ ಅಕಾಡೆಮಿ ತಂಡ 115ನೇ ಅಖಿಲ ಭಾರತ ಆಗಾ ಖಾನ್‌ ಗೋಲ್ಡ್‌ ಕಪ್‌ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪೈಪೋಟಿಯಲ್ಲಿ ಎಸ್‌ಎಐಎಲ್‌ ಅಕಾಡೆಮಿ 2–1 ಗೋಲುಗಳಿಂದ ಆರ್ಮಿ ಇಲೆವನ್‌ ದಾನಾಪುರ ತಂಡವನ್ನು ಸೋಲಿಸಿತು.

ಆರಂಭದಿಂದಲೇ ಮಿಂಚಿನ ಆಟ ಆಡಿದ ಉಭಯ ತಂಡಗಳು 1–1ರಲ್ಲಿ ಸಮಬಲ ಸಾಧಿಸಿದ್ದವು. ನಿರ್ಣಾಯಕ ಹಂತದಲ್ಲಿ ಗೋಲು ಹೊಡೆದ ಜಯಪ್ರಕಾಶ್‌ ಪಟೇಲ್‌ಎಸ್‌ಎಐಎಲ್‌ ಅಕಾಡೆಮಿ ತಂಡದ ಸಂಭ್ರಮಕ್ಕೆ ಕಾರಣರಾದರು.

ADVERTISEMENT

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಎಸ್‌ಎಐಎಲ್‌ ಅಕಾಡೆಮಿ 4–2 ಗೋಲುಗಳಿಂದ ಮಧ್ಯಪ್ರದೇಶ ತಂಡವನ್ನು ಪರಾಭವಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.