ADVERTISEMENT

ಐಎಸ್‌ಎಲ್‌: ರೆಫರಿಗಳ ಒಪ್ಪಂದ ನವೀಕರಣದ ಭರವಸೆ

ಪಿಟಿಐ
Published 9 ಆಗಸ್ಟ್ 2025, 16:21 IST
Last Updated 9 ಆಗಸ್ಟ್ 2025, 16:21 IST
ಇಂಡಿಯನ್ ಸೂಪರ್ ಲೀಗ್ ಪಂದ್ಯ
ಇಂಡಿಯನ್ ಸೂಪರ್ ಲೀಗ್ ಪಂದ್ಯ   

ನವದೆಹಲಿ: ಮುಂಬರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಅನಿಶ್ಚಿತತೆಯ ನಡುವೆಯು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತನ್ನ ರೆಫೆರಿಗಳ ಒಪ್ಪಂದವನ್ನು ನವೀಕರಿಸುವ ಭರವಸೆಯನ್ನು ಶನಿವಾರ ನೀಡಿದೆ. 

‘ಆಗಸ್ಟ್ 5ರಂದು ಒಂಬತ್ತು ರೆಫರಿಗಳಿಂದ ಜಂಟಿ ಪತ್ರ ಬಂದಿದೆ. ತಮ್ಮ ವೃತ್ತಿಪರ ಪಂದ್ಯಗಳ ಅಧಿಕೃತ ಒಪ್ಪಂದಗಳನ್ನು ವಿಸ್ತರಿಸುವಂತೆ ಪತ್ರದಲ್ಲಿ ಕೋರಲಾಗಿದೆ’ ಎಂದು ಎಐಎಫ್‌ಎಫ್ ತಿಳಿಸಿದೆ.

‘ರೆಫರಿಗಳ ಒಪ್ಪಂದಗಳನ್ನು ‘ಸ್ಥಾಪಿತ ಕಾರ್ಯವಿಧಾನ’ಗಳಿಗೆ ಅನುಗುಣವಾಗಿ ನವೀಕರಿಸಲಾಗುವುದು. ಇದು ಎಲೀಟ್‌ ರೆಫರೀಸ್ ಡೆವಲಪ್‌ಮೆಂಟ್ ಪ್ರೋಗ್ರಾಂನ ಅಸ್ತಿತ್ವದಲ್ಲಿರುವ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ’ ಎಂದು ಎಐಎಫ್‌ಎಫ್‌ ನೋಟಿಸ್‌ನಲ್ಲಿ ತಿಳಿಸಿದೆ.

ADVERTISEMENT

‘ಪ್ರಸ್ತುತ ಡುರಾಂಡ್ ಕಪ್ ಮತ್ತು ಫುಟ್‌ಬಾಲ್ ಕ್ಲಬ್ ಚಾಂಪಿಯನ್‌ಷಿಪ್‌ನಂತಹ ಟೂರ್ನಿಗಳಲ್ಲಿ ನಮ್ಮ ಅನೇಕ ರೆಫರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಂತದಲ್ಲಿ ಎಲ್ಲಾ ರೆಫರಿಗಳು ಶಾಂತವಾಗಿರಬೇಕು’ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.