ADVERTISEMENT

ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದ ಅಕ್ಷತಾ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 13:33 IST
Last Updated 23 ಸೆಪ್ಟೆಂಬರ್ 2021, 13:33 IST
ಅಕ್ಷತಾ ಪೂಜಾರಿ
ಅಕ್ಷತಾ ಪೂಜಾರಿ   

ಹುಬ್ಬಳ್ಳಿ: ಇಲ್ಲಿನ ಕೆಎಲ್‌ಇ ಸೊಸೈಟಿಯ ಜಿ.ಕೆ. ಕಾನೂನು ಮಹಾವಿದ್ಯಾಲಯದ ಅಕ್ಷತಾ ಪೂಜಾರಿ ಇತ್ತೀಚೆಗೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದ 60ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಹೆಪ್ಟಾಥ್ಲಾನ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಅಕ್ಷತಾ ಒಟ್ಟು 4939 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅಕ್ಷತಾ 2020ರಲ್ಲಿ ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿಯೂ ಕಂಚು ಜಯಿಸಿದ್ದರು.

‘ವಾರಂಗಲ್‌ನಲ್ಲಿ ಕರ್ನಾಟಕ ತಂಡಕ್ಕೆ ಒಂದು ಚಿನ್ನದ ಪದಕವಷ್ಟೇ ಲಭಿಸಿದೆ. ಆ ಪದಕವನ್ನು ನಾನೇ ಗೆದ್ದು ತಂದಿದ್ದೇನೆ ಎನ್ನುವುದು ಹೆಮ್ಮೆಯ ಭಾವ ಮೂಡಿಸಿದೆ. ಧಾರವಾಡದ ಆರ್‌.ಎನ್‌. ಶೆಟ್ಟಿ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಗಣೇಶ ನಾಯ್ಕ ಅವರಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದೇನೆ’ ಎಂದು ಅಕ್ಷತಾ ತಿಳಿಸಿದರು. ಅಕ್ಷತಾ, ನಗರದ ಅಂಗು ಪೂಜಾರಿ ಹಾಗೂ ಜಯಂತಿ ದಂಪತಿಯ ಪುತ್ರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.