ADVERTISEMENT

ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 18:48 IST
Last Updated 1 ಡಿಸೆಂಬರ್ 2021, 18:48 IST
ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ನ ಲಾಂಛನವನ್ನು ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಮತ್ತು ಡಿಜಿಪಿ ಪ್ರವೀಣ್ ಸೂದ್ ಬಿಡುಗಡೆ ಮಾಡಿದರು
ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ನ ಲಾಂಛನವನ್ನು ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಮತ್ತು ಡಿಜಿಪಿ ಪ್ರವೀಣ್ ಸೂದ್ ಬಿಡುಗಡೆ ಮಾಡಿದರು   

ಬೆಂಗಳೂರು: ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್‌ಷಿಪ್‌ ಗುರುವಾರದಿಂದ ಡಿಸೆಂಬರ್ 11ರ ವರೆಗೆ ನಗರದ ಫೀಲ್ಡ್‌ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಾಜ್ಯ ಪೊಲೀಸ್ ಆತಿಥ್ಯ ವಹಿಸಿರುವ ಚಾಂಪಿಯನ್‌ಷಿಪ್‌ನ ಲಾಂಛನವನ್ನು ಡಿಜಿಪಿ ಪ್ರವೀಣ್ ಸೂದ್‌ ಬುಧವಾರ ಬಿಡುಗಡೆ ಮಾಡಿದರು. ಆರು ಮಹಿಳಾ ತಂಡಗಳು ಸೇರಿದಂತೆ ಒಟ್ಟು 30 ತಂಡಗಳು ಪಾಲ್ಗೊಳ್ಳುತ್ತಿವೆ.

‘ಎ’ ಗುಂಪಿನಲ್ಲಿ ದೆಹಲಿಯ ಸಿಆರ್‌ಪಿಎಫ್‌, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ಪೊಲೀಸ್‌ ಇದ್ದು ಜಲಂಧರ್‌ನ ಬಿಎಸ್‌ಎಫ್‌, ಉತ್ತರಾಖಂಡ ಮತ್ತು ಪಂಜಾಬ್ ಪೊಲೀಸ್‌ ತಂಡಗಳು ‘ಬಿ’ ಗುಂಪಿನಲ್ಲಿವೆ. ಒಡಿಶಾ ಪೊಲೀಸ್‌, ಎಸ್‌ಎಸ್‌ಬಿ ಮತ್ತು ಗುಜರಾತ್‌ ’ಸಿ’ ಗುಂಪಿನಲ್ಲಿದ್ದು ಹರಿಯಾಣ ಪೊಲೀಸ್‌, ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳು ‘ಡಿ’ ಗುಂಪಿನಲ್ಲಿ, ಛತ್ತೀಸ್‌ಗಡ, ಪುದುಚೇರಿ ಮತ್ತು ಜಾರ್ಖಂಡ್ ‘ಇ’ ಗುಂಪಿನಲ್ಲಿ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಣಿಪುರ ’ಎಫ್‌’ ಗುಂಪಿನಲ್ಲಿ, ಸಿಐಎಸ್‌ಎಫ್‌, ಪಶ್ಚಿಮ ಬಂಗಾಳ ಮತ್ತು ಜಮ್ಮು–ಕಾಶ್ಮೀರ ‘ಜಿ’ ಗುಂಪಿನಲ್ಲಿ, ಐಟಿಬಿಪಿ, ರಾಜಸ್ಥಾನ ಮತ್ತು ಕೇರಳ ‘ಎಚ್‌’ ಗುಂಪಿನಲ್ಲಿವೆ.

ADVERTISEMENT

ಮಹಿಳೆಯರ ವಿಭಾಗದಲ್ಲಿ ಛತ್ತೀಸ್‌ಗಡ, ಒಡಿಶಾ ಮತ್ತು ಸಿಆರ್‌ಪಿಎಫ್‌ ‘ಎ’ ಗುಂಪಿನಲ್ಲೂ ತಮಿಳುನಾಡು, ಮಹಾರಾಷ್ಟ್ರ ಮತ್ತು ಎಸ್‌ಎಸ್‌ಬಿ ‘ಬಿ’ ಗುಂಪಿನಲ್ಲೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.