ADVERTISEMENT

ಕದನ ಕಣಕ್ಕೆ ವಿದಾಯ ಹೇಳಿದ ಬಾಕ್ಸರ್ ಅಮೀರ್ ಖಾನ್

ಏಜೆನ್ಸೀಸ್
Published 13 ಮೇ 2022, 13:10 IST
Last Updated 13 ಮೇ 2022, 13:10 IST
ಅಮೀರ್ ಖಾನ್ (ಎಡ) ಪಂಚಿಂಗ್ ಬಲ –ಟ್ವಿಟರ್ ಚಿತ್ರ
ಅಮೀರ್ ಖಾನ್ (ಎಡ) ಪಂಚಿಂಗ್ ಬಲ –ಟ್ವಿಟರ್ ಚಿತ್ರ   

ಲಂಡನ್‌: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಅಮೀರ್ ಖಾನ್ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 17 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಅವರಿಗೆ ಈಗ 35 ವರ್ಷ.

ಲೈಟ್ ವೆಲ್ಟರ್‌ವೇಟ್‌ ವಿಭಾಗದ ಅತ್ಯಂತ ಸಮರ್ಥ ಬಾಕ್ಸರ್ ಆಗಿದ್ದ ಅಮೀರ್ ಒಟ್ಟು 40 ಫೈಟ್‌ಗಳ ಪೈಕಿ 34ರಲ್ಲಿ ಗೆದ್ದು ದಾಖಲೆ ಮಾಡಿದ್ದರು. ವೃತ್ತಿಜೀವನದ ಮೊದಲ 18 ಫೈಟ್‌ಗಳಲ್ಲಿ ಜಯ ಸಾಧಿಸಿದ್ದ ಅವರು ಬ್ರಿಟಿಷ್ ಬಾಕ್ಸರ್‌ಗಳ ಪೈಕಿ ಹೆಚ್ಚು ಜನಪ್ರಿಯರಾಗಿದ್ದರು. 2004ರ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸೋತಿದ್ದರು.

ಈ ವರ್ಷದ ಫೆಬ್ರುವರಿಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಬೌಟ್‌ನಲ್ಲಿ ದೀರ್ಘಕಾಲದ ಎದುರಾಳಿ ಕೆಲ್ ಬ್ರೂಕ್‌ ಎದುರು ಆರನೇ ಸುತ್ತಿನಲ್ಲಿ ಸೋಲುಂಡಿದ್ದರು. ಇದು ಅವರ ವೃತ್ತಿಜೀವನ ಮುಕ್ತಾಯಕ್ಕೆ ಪ್ರಮುಖ ಕಾರಣವಾಗಿತ್ತು. ಬ್ರೂಕ್‌ ಕಳೆದ ವಾರ ನಿವೃತ್ತಿ ಘೋಷಿಸಿದ್ದರು.

ADVERTISEMENT

‘ನನ್ನ ಗ್ಲೌಸ್‌ಗಳಿಗೆ ವಿಶ್ರಾಂತಿ ನೀಡಲು ಇದು ಸುಸಮಯ. ವರ್ಷಗಳ ಕಾಲ ಬಾಕ್ಸಿಂಗ್‌ ಕ್ಷೇತ್ರದಲ್ಲಿ ಮಿಂಚಲು ಸಾಧ್ಯವಾದದ್ದು ನನ್ನ ಅದೃಷ್ಟ’ ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.