ADVERTISEMENT

ಸ್ಕ್ವಾಷ್‌ | ಬಲಿಷ್ಠ ಎದುರಾಳಿ ಎದುರು ಮಂಕಾದ ಅನಾಹತ್‌ ‘ರನ್ನರ್‌ ಅಪ್‌’

ಪಿಟಿಐ
Published 6 ಜನವರಿ 2020, 13:09 IST
Last Updated 6 ಜನವರಿ 2020, 13:09 IST
ಅನಾಹತ್‌ ಸಿಂಗ್‌ (ಎಡ)
ಅನಾಹತ್‌ ಸಿಂಗ್‌ (ಎಡ)   

ಬರ್ಮಿಂಗ್‌ಹ್ಯಾಂ: ಬಲಿಷ್ಠ ಎದುರಾಳಿಯ ಎದುರು ಸಂಪೂರ್ಣವಾಗಿ ಮಂಕಾದ ಭಾರತದ ಅನಾಹತ್‌ ಸಿಂಗ್ ಅವರು ಪ್ರತಿಷ್ಠಿತ ಬ್ರಿಟಿಷ್‌ ಜೂನಿಯರ್‌ ಓಪನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಲು ವಿಫಲರಾದರು.

ಸೋಮವಾರ ನಡೆದ 13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಅನಾಹತ್ 0–11, 1–11, 4–11 ನೇರ ಗೇಮ್‌ಗಳಿಂದ ಈಜಿಪ್ಟ್‌ನ ಅಮಿನಾ ಒರ್ಫಿ ಎದುರು ಶರಣಾದರು.

ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತೆ ಜಾನಾ ಗಲಾಗೆ ಆಘಾತ ನೀಡಿದ್ದ ಅನಾಹತ್‌ಗೆ ಅಗ್ರಶ್ರೇಯಾಂಕದ ಆಟಗಾರ್ತಿ ಅಮಿನಾ ಅವರ ಸವಾಲು ಮೀರಿನಿಲ್ಲಲು ಆಗಲಿಲ್ಲ.

ADVERTISEMENT

ಮೊದಲ ಗೇಮ್‌ನಲ್ಲಿ ಏಕಪಕ್ಷೀಯವಾಗಿ ಗೆದ್ದ ಅಮಿನಾ, ಎರಡನೇ ಗೇಮ್‌ನಲ್ಲೂ ಅಬ್ಬರಿಸಿದರು. ಮೂರನೇ ಗೇಮ್‌ನ ಶುರುವಿನಲ್ಲಿ ಎದುರಾಳಿಗೆ ಪ್ರಬಲ ಸ್ಪರ್ಧೆ ಒಡ್ಡಿದ ಅನಾಹತ್‌ ಬಳಿಕ ಮಂಕಾದರು.

ವೀರ್‌ಗೆ ನಿರಾಸೆ: 19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿದ್ದ ವೀರ್‌ ಚೋಟ್ರಾನಿ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು.

ಸೆಮಿಫೈನಲ್‌ನಲ್ಲಿ ಈಜಿಪ್ಟ್‌ನ ಆಟಗಾರ, ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಮುಸ್ತಾಫ ಅಲ್‌ ಸಿರ್ಟಿ 7–11, 11–2, 11–6, 11–8ಯಿಂದ ಭಾರತದ ಆಟಗಾರನನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.