ADVERTISEMENT

ವಿಶ್ವ ಜೂನಿಯರ್‌ ಸ್ಕ್ವಾಷ್‌: ಅನಾಹತ್ ಸಿಂಗ್‌ ಆಯ್ಕೆ

ಪಿಟಿಐ
Published 11 ಜೂನ್ 2022, 18:46 IST
Last Updated 11 ಜೂನ್ 2022, 18:46 IST
ಅನಾಹತ್ ಸಿಂಗ್‌ (ಎಡ)– ಪ್ರಜಾವಾಣಿ ಚಿತ್ರ
ಅನಾಹತ್ ಸಿಂಗ್‌ (ಎಡ)– ಪ್ರಜಾವಾಣಿ ಚಿತ್ರ   

ನವದೆಹಲಿ: ಭಾರತದ ಅನಾಹತ್ ಸಿಂಗ್ ಅವರು ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ದೆಹಲಿಯ ಬಾಲಕಿ ಅನಾಹತ್ ಅಗ್ರಸ್ಥಾನ ಗಳಿಸಿದರು. ಆಗಸ್ಟ್‌ನಲ್ಲಿ ಫ್ರಾನ್ಸ್‌ನ ನ್ಯಾನ್ಸಿಯಲ್ಲಿ ನಿಗದಿಯಾಗಿದೆ.

ಅನಾಹತ್ ಆಯ್ಕೆ ಟ್ರಯಲ್ಸ್‌ನ ಫೈನಲ್‌ನಲ್ಲಿ 3–0ಯಿಂದ ಮಹಾರಾಷ್ಟ್ರದ ಐಶ್ವರ್ಯ ಖೂಬ್‌ಚಾಂದಿನಿ ಅವರನ್ನು ಸೋಲಿಸಿದ್ದರು.

ADVERTISEMENT

15 ವರ್ಷದೊಳಗಿನವರ ವಿಭಾಗದವರ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಅನಾಹತ್‌, ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್‌ ಕೂಡ ಆಗಿದ್ದಾರೆ. 2019ರಲ್ಲಿ ಬ್ರಿಟಿಷ್‌ ಜೂನಿಯರ್ ಸ್ಕ್ವಾಷ್ ಟೂರ್ನಿಯಲ್ಲಿ ಚಿನ್ನ ಸೇರಿದಂತೆ ಹಲವು ಪದಕಗಳ ವಿಜೇತೆಯಾಗಿದ್ದಾರೆ.

ಇದೇ 15ರಿಂದ 19ರವರೆಗೆ ಥಾಯ್ಲೆಂಡ್‌ನ ಪಟ್ಟಾಯಾದಲ್ಲಿ ನಡೆಯಲಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಗೆ ಅನಾಹತ್ ಸಜ್ಜಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.