ADVERTISEMENT

ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿ: ಪಾಯಿಂಟ್‌ ಹಂಚಿಕೊಂಡ ಆನಂದ್

ಪಿಟಿಐ
Published 18 ಜನವರಿ 2020, 19:45 IST
Last Updated 18 ಜನವರಿ 2020, 19:45 IST
ವಿಶ್ವನಾಥನ್‌ ಆನಂದ್‌
ವಿಶ್ವನಾಥನ್‌ ಆನಂದ್‌   

ವಿಜ್ಕ್‌ ಆನ್‌ಜಿ, ನೆದರ್ಲೆಂಡ್ಸ್‌: ಆತಿಥೇಯ ನೆದರ್ಲೆಂಡ್ಸ್‌ನ ಜೋರ್ಡೆನ್‌ ವಾನ್‌ ಫಾರೀಸ್ಟ್‌,ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನಲ್ಲಿ ಶನಿವಾರ ಭಾರತದ ವಿಶ್ವನಾಥನ್‌ ಆನಂದ್‌ ಅವರ ಜೊತೆ ಸುಲಭವಾಗಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಟೂರ್ನಿಯ ಹಿಂದಿನ ಕೆಲವು ಪಂದ್ಯಗಳಂತೆ ಈ ಬಾರಿಯೂ ಭಾರತದ ಮಾಜಿ ವಿಶ್ವ ಚಾಂಪಿಯನ್‌, ಆಟವನ್ನು ಸಂಕೀರ್ಣ ಸ್ಥಿತಿಗೆ ತಲುಪಿಸಲು ಯತ್ನಿಸಿದರು. ಆದರೆ ‘ಕ್ವೀನ್‌’ಗಳನ್ನು ಕಳೆದುಕೊಂಡ ಬಳಿಕ ಇಬ್ಬರೂ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗಿ ನಂತರ ‘ಡ್ರಾ’ಕ್ಕೆ ಒಪ್ಪಿಕೊಂಡರು.

ಆನಂದ್‌ ಆರು ಪಂದ್ಯಗಳಿಂದ ಮೂರು ಅಂಕ ಪಡೆದಿದ್ದು, ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನೂ ಏಳು ಸುತ್ತುಗಳು ಬಾಕಿಯಿವೆ. ಟೂರ್ನಿಯಲ್ಲಿ ಮೊದಲ ಜಯ ದಾಖಲಿಸುವ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಆಸೆ ಇನ್ನೂ ಕೈಗೂಡಿಲ್ಲ. 6ನೇ ಸುತ್ತಿನಲ್ಲಿ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನ ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.