ADVERTISEMENT

ಗಾಲ್ಫ್: ಅನಿರ್ಬನ್ ರನ್ನರ್‌ಅಪ್, ₹16.60 ಕೋಟಿ ಬಹುಮಾನ

ಕೂದಲೆಳೆ ಅಂತರದಿಂದ ಪ್ರಶಸ್ತಿ ತಪ್ಪಿಸಿಕೊಂಡ ಭಾರತದ ಆಟಗಾರ

ಪಿಟಿಐ
Published 16 ಮಾರ್ಚ್ 2022, 14:12 IST
Last Updated 16 ಮಾರ್ಚ್ 2022, 14:12 IST
ಅನಿರ್ಬನ್ ಲಾಹಿರಿ ಆಟದ ಪರಿ– ಎಎಫ್‌ಪಿ ಚಿತ್ರ
ಅನಿರ್ಬನ್ ಲಾಹಿರಿ ಆಟದ ಪರಿ– ಎಎಫ್‌ಪಿ ಚಿತ್ರ   

ಪಾಂಟ್‌ ವೆದ್ರಾ ಬೀಚ್‌: ಅಮೋಘ ಸಾಮರ್ಥ್ಯ ತೋರಿದ ಭಾರತದ ಗಾಲ್ಫರ್‌ ಅನಿರ್ಬನ್ ಲಾಹಿರಿ ಅವರು ಇಲ್ಲಿ ನಡೆದ ಪ್ಲೇಯರ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್ ಆದರು.

ಒಟ್ಟು ₹ 152 ಕೋಟಿ ಬಹುಮಾನ ಮೊತ್ತದ ಟೂರ್ನಿಯಲ್ಲಿ ಸೋಮವಾರ ಅನಿರ್ಬನ್ ಕೇವಲ ಒಂದು ‘ಸ್ಟ್ರೋಕ್‌’ ಅಂತರದಿಂದ ಪ್ರಶಸ್ತಿ ತಪ್ಪಿಸಿಕೊಂಡರು. ಆದರೆ ಜೀವನಶ್ರೇಷ್ಠ ₹16.60 ಕೋಟಿ ಮೊತ್ತವನ್ನು ಅವರು ಜೇಬಿಗಿಳಿಸಿದರು.

ಆಸ್ಟ್ರೇಲಿಯಾದ ಕ್ಯಾಮರಾನ್ ಸ್ಮಿತ್‌ ಪ್ರಶಸ್ತಿಗೆ ಮುತ್ತಿಕ್ಕಿದರು. ಅವರಿಗೆ ಬಹುಮಾನ ಮೊತ್ತವಾಗಿ ₹ 27 ಕೋಟಿ ಲಭಿಸಿತು.

ADVERTISEMENT

‘ನಾನು ಟ್ರೋಫಿಯನ್ನು ಗೆಲ್ಲಬಯಸಿದ್ದೆ. ಏಳು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದೇನೆ. ಪ್ರಶಸ್ತಿ ಜಯ ಇದುವರೆಗೆ ಸಾಧ್ಯವಾಗಿಲ್ಲ. ಆ ಹಂಬಲ ಯಾವಾಗಲೂ ನನ್ನನ್ನು ಕಾಡುತ್ತದೆ. ಇಲ್ಲಿ ಉತ್ತಮ ಅವಕಾಶವಿತ್ತು‘ ಎಂದು ಟೂರ್ನಿಯ ಬಳಿಕ ಅನಿರ್ಬನ್ ನುಡಿದರು.

2017ರ ಮೆಮೊರಿಯಲ್ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದ 34 ವರ್ಷದ ಅನಿರ್ಬನ್ ಅವರಿಗೆ ಇದು ವೃತ್ತಿಜೀವನದ ಎರಡನೇ ರನ್ನರ್ ಅಪ್ ಸ್ಥಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.