ADVERTISEMENT

ಆರ್ಚರಿ: ನಾಲ್ಕು ವಿಭಾಗಗಳಲ್ಲಿ ಫೈನಲ್‌ಗೆ ಭಾರತ

ಏಷ್ಯಾಕಪ್‌ ಸ್ಟೇಜ್ 2 ವಿಶ್ವ ರ‍್ಯಾಂಕಿಂಗ್ ಟೂರ್ನಿ

ಪಿಟಿಐ
Published 2 ಮೇ 2023, 12:25 IST
Last Updated 2 ಮೇ 2023, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಾಷ್ಕೆಂಟ್‌, ಉಜ್ಬೆಕಿಸ್ತಾನ: ಏಷ್ಯಾ ಕಪ್‌ ಸ್ಟೇಜ್ 2 ವಿಶ್ವ ರ‍್ಯಾಂಕಿಂಗ್ ಆರ್ಚರಿ ಟೂರ್ನಿಯಲ್ಲಿ ಭಾರತದ ಆರ್ಚರಿ ಸ್ಪರ್ಧಿಗಳು ಭರ್ಜರಿ ಆರಂಭ ಮಾಡಿದ್ದಾರೆ. ಮಂಗಳವಾರ ನಾಲ್ಕು ತಂಡ ವಿಭಾಗಗಳ ಸ್ಪರ್ಧೆಗಳಲ್ಲಿ ಫೈನಲ್ ತಲುಪಿದ್ದಾರೆ.

ಪುರುಷರ ರಿಕರ್ವ್ ತಂಡದಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಮೃಣಾಲ್ ಚೌಹಾನ್‌, ತುಷಾರ್ ಶೆಲಕೆ ಮತ್ತು ಜಯಂತ್ ತಾಲೂಕ್ದಾರ್ ಅವರು ಸೆಮಿಫೈನಲ್‌ನಲ್ಲಿ 6-0 ಯಿಂದ ಉಜ್ಬೆಕಿಸ್ತಾನದ ಚೆನ್ ಯಾವೊ ಯುಯ್‌, ಮಿರ್ಜಾಲೊಲ್‌ ಕರೊರೊವ್‌ ಮತ್ತು ಅಮೀರ್‌ಖಾನ್‌ ಸದಿಕೊವ್‌ ಎದುರು ಗೆದ್ದರು.

ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತದ ಸ್ಪರ್ಧಿಗಳು ಚೀನಾ ತಂಡದ ಸವಾಲು ಎದುರಿಸುವರು.

ADVERTISEMENT

ಸಂಗೀತಾ, ಪ್ರಾಚಿ ಸಿಂಗ್‌ ಮತ್ತು ತನಿಶಾ ವರ್ಮಾ ಅವರಿದ್ದ ಮಹಿಳೆಯರ ರಿಕರ್ವ್ ತಂಡವು ನಾಲ್ಕರ ಘಟ್ಟದಲ್ಲಿ 6–0ಯಿಂದ ಸೌದಿ ಅರೇಬಿಯಾ ತಂಡಕ್ಕೆ ಸೋಲುಣಿಸಿ ಫೈನಲ್‌ಗೆ ಕಾಲಿಟ್ಟಿತು. 

ಪುರುಷರ ಕಾಂಪೌಂಡ್‌ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಭಾರತದ ಅಭಿಷೇಕ್ ವರ್ಮಾ, ಕುಶಾಲ್ ದಲಾಲ್‌ ಮತ್ತು ಅಮಿತ್‌ 236-221ರಿಂದ ಸೌದಿ ಅರೇಬಿಯಾ ತಂಡವನ್ನು ಸೋಲಿಸಿದರು.

ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿ, ಪ್ರಣೀತ್ ಕೌರ್, ಪ್ರಗತಿ ಮತ್ತು ರಾಗಿಣಿ ಅವರಿದ್ದ ಮಹಿಳೆಯರ ಕಾಂಪೌಂಡ್‌ ತಂಡವೂ ಫೈನಲ್‌ಗೆ ಸ್ಥಾನ ಖಚಿತಪಡಿಸಿಕೊಂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.