
ಬೆಂಗಳೂರು: ಮುಂಬರುವ 45ನೇ ಎನ್‌ಟಿಪಿಸಿ ಸೀನಿಯರ್ (ಪುರುಷರ ಮತ್ತು ಮಹಿಳೆಯರ) ರಿಕರ್ವ್ ಸುತ್ತು, 21ನೇ ಎನ್‌ಟಿಪಿಸಿ ಸೀನಿಯರ್ ಕಾಂಪೌಂಡ್ ಸುತ್ತು, 32ನೇ ಸೀನಿಯರ್ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಆಯ್ಕೆ ಮಾಡಲು ಕರ್ನಾಟಕ ಅಮೆಚೂರ್ ಆರ್ಚರಿ ಸಂಸ್ಥೆಯು ಇದೇ 16ರಂದು ಕಂಠೀರವ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದೆ.
ಈ ಸ್ಪರ್ಧೆಗಳು ತೆಲಂಗಾಣದ ಹೈದರಾಬಾದಿನಲ್ಲಿ ಡಿಸೆಂಬರ್ 10 ರಿಂದ 19ರವರೆಗೆ ನಡೆಯಲಿದೆ. ಇದರ ಜೊತೆಗೆ ಛತ್ತೀಸಗಢದ ರಾಯಪುರದಲ್ಲಿ ಡಿಸೆಂಬರ್ 22 ರಿಂದ 30ರವರೆಗೆ ನಡೆಯುವ 45ನೇ ಜೂನಿಯರ್ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗೂ ಆಯ್ಕೆ ಟ್ರಯಲ್ಸ್ ನಡೆಯಲಿದೆ.
ಆಸಕ್ತ ಸ್ಪರ್ಧಿಗಳು ಅಂದು (ಭಾನುವಾರ) ಬೆಳಿಗ್ಗೆ 8.30ಕ್ಕೆ ಆರ್ಚರಿ ಮೈದಾನದಲ್ಲಿ ಹಾಜರಿರುವಂತೆ ಸಂಸ್ಥೆಯ ಕಾರ್ಯದರ್ಶಿ ಟಿ.ಅನಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯ ನೋಂದಾಯಿತ ಆರ್ಚರಿ ಸ್ಪರ್ಧಿಗಳು, ತಮ್ಮ ಹೆಸರನ್ನು ಕಾರ್ಯದರ್ಶಿ ಅವರಲ್ಲಿ ಇದೇ 15ರಂದು ಅಥವಾ ಅದಕ್ಕೆ ಮೊದಲು ನೋಂದಾಯಿಸುವಂತೆ ಕೋರಲಾಗಿದೆ. ದೂ: 080 22275656.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.