ADVERTISEMENT

ಭಾರತದ ಆರ್ಚರ್‌ಗಳಿಗೆ ನಿರಾಸೆ

ವಿಶ್ವಕಪ್‌ ಎರಡನೇ ಹಂತದ ಆರ್ಚರಿ

ಪಿಟಿಐ
Published 10 ಮೇ 2019, 19:09 IST
Last Updated 10 ಮೇ 2019, 19:09 IST

ಶಾಂಘೈ: ಆರ್ಚರಿ ವಿಶ್ವಕಪ್‌ ಎರಡನೇ ಹಂತದ ಟೂರ್ನಿಯಲ್ಲಿ ಭಾರತ ಸ್ಪರ್ಧಿಗಳು ಕಳಪೆ ಸಾಮರ್ಥ್ಯ ತೋರಿದ್ದಾರೆ. ಪದಕದ ಭರವಸೆ ಮೂಡಿಸಿದ್ದ ರಿಕರ್ವ್‌ ಹಾಗೂ ಕಾಂಪೌಂಡ್‌ ಮಿಶ್ರ ತಂಡಗಳು ಸೋತು ಹೊರಬಿದ್ದಿವೆ. ಆ ಮೂಲಕ ಭಾರತೀಯರು ಒಂದೂ ಪದಕ ಗೆಲ್ಲದೆ ಹಿಂದಿರುಗಿದ್ದಾರೆ.

ರಿಕರ್ವ್‌ ವಿಭಾಗದಲ್ಲಿ ಜಗದೀಶ್‌ – ಪ್ರೀತಿ ಜೋಡಿ ಅಮೆರಿಕಾದ ಬ್ರ್ಯಾಡಿ ಎಲಿಸನ್‌ – ಎರಿನ್‌ ಮಿಕಲ್‌ಬರಿ ವಿರುದ್ಧ ಸೋತರು.

ಆ ಬಳಿಕ ಕಾಂಪೌಂಡ್‌ ವಿಭಾಗದ ಮಿಶ್ರ ತಂಡದಲ್ಲಿದ್ದ ಪ್ರವೀಣ್‌ಕುಮಾರ್‌–ಪರ್ವೀನಾ ಅವರು ತಮಗಿಂತ ಕೆಳ ರ‍್ಯಾಂಕಿನ ಮಲೇಷ್ಯಾ ಜೋಡಿಗೆ 151–155 ಅಂಕಗಳ ಅಂತರದಿಂದ ಮಣಿದರು.

ADVERTISEMENT

ಕಾಂಪೌಂಡ್‌ ಹಾಗೂ ರಿಕರ್ವ್‌ನಗುಂಪು ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿಗುರುವಾರವೇ ದೇಶದ ಸ್ಪರ್ಧಿಗಳು ಅಭಿಯಾನ ಕೊನೆಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.