ADVERTISEMENT

ಆನ್‌ಲೈನ್ ಚೆಸ್‌: ಅರ್ಹನ್, ಶ್ರಿಯಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 2:49 IST
Last Updated 15 ಜೂನ್ 2021, 2:49 IST
ಚೆಸ್‌
ಚೆಸ್‌   

ಬೆಂಗಳೂರು: ಅರ್ಹನ್ ಚೇತನ್ ಆನಂದ್ ಮತ್ತು ಶ್ರಿಯಾ ರೇವಣಕರ್ ಅವರು ಯುನೈಟೆಡ್ ಕರ್ನಾಟಕ ಚೆಸ್‌ ಸಂಸ್ಥೆ ಆಯೋಜಿಸಿದ್ದ ಆನ್‌ಲೈನ್ ಚೆಸ್ ಟೂರ್ನಿಯ ಹದಿನೆಂಟು ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಪ್ರಶಸ್ತಿ ಗೆದ್ದುಕೊಂಡರು. ಬಾಲಕರ ವಿಭಾಗದಲ್ಲಿ ಅರ್ನವ್ ಮುರಳೀಧರ ಮತ್ತು ಬಾಲಕಿಯರ ವಿಭಾಗದಲ್ಲಿ ಸಂಜನಾ ರಘುನಾಥ್ ದ್ವಿತೀಯ ಸ್ಥಾನ ಗಳಿಸಿದರು.

ಹದಿನಾರು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪಂಕಜ್ ಭಟ್ ಹಾಗೂ ಸುಜನ್ ಭಾರದ್ವಾಜ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸಂಜನಾ ರಘುನಾಥ್ ಮತ್ತು ಅನನ್ಯ ಅರಂಬೂಕಮ್ ಕ್ರಮವಾಗಿ ಮೊದಲೆರಡು ಸ್ಥಾನ ಗಳಿಸಿದರು.

ಹದಿನಾಲ್ಕು ವರ್ಷದೊಳಗಿನ ಬಾಲಕರ ವಿಭಾಗದ ಮೊದಲ ಸ್ಥಾನ ಅರ್ಹನ್ ಚೇತನ್ ಆನಂದ್‌ ಪಾಲಾದರೆ ಬಾಲಕಿಯರ ವಿಭಾಗದಲ್ಲಿ ಮನಸ್ವಿ ಮೊದಲಿಗರಾದರು. ಬಾಲಕರ ವಿಭಾಗದಲ್ಲಿ ಪ್ರಗಿ ನಾರಾಯಣ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದ ದ್ವಿತೀಯ ಸ್ಥಾನ ಕೆ.ಜಿ.ಆರ್.ಅನಘ ಪಾಲಾಯಿತು.

ADVERTISEMENT

ಹನ್ನೆರಡು ವರ್ಷದೊಳಗಿನ ಬಾಲಕರ ವಿಭಾಗದಲ್ಲಿಸಾತ್ವಿಕ್ ಅಡಿಗ ಪ್ರಥಮ, ಚಿನ್ಮಯ್ ಕೌಶಿಕ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಅಕ್ಷಯ ಸಾಥಿ ಪ್ರಥಮ, ರುದ್ರ ರಾಜೀವ್ ದ್ವಿತೀಯ ಸ್ಥಾನಪಡೆದರು.

ಹತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಿನ್ಮಯ್ ಕೌಶಿಕ್ ಪ್ರಥಮ ಹಾಗೂ ಅದ್ವೈತ್ ಪ್ರಭುರಾಜ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಸಿದ್ಧಿ ರಾವ್ ಪ್ರಥಮ ಹಾಗೂ ಆನಂದಿ ಪಿ. ದ್ವಿತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.