ADVERTISEMENT

ಚಳಿಗಾಲದ ಒಲಿಂಪಿಕ್ಸ್‌ಗೆ ತೆರಳಿದ ಆರಿಫ್ ಖಾನ್‌ ನೇತೃತ್ವದ ಭಾರತ ತಂಡ

ಚೀನಾದ ಬೀಜಿಂಗ್‌ನಲ್ಲಿ ಫೆಬ್ರುವರಿ 4ರಿಂದ ನಡೆಯಲಿರುವ ಒಲಿಂಪಿಕ್ಸ್

ಪಿಟಿಐ
Published 1 ಫೆಬ್ರುವರಿ 2022, 12:53 IST
Last Updated 1 ಫೆಬ್ರುವರಿ 2022, 12:53 IST
ಆರಿಫ್‌ ಖಾನ್‌– ಎಎಫ್‌ಪಿ ಚಿತ್ರ
ಆರಿಫ್‌ ಖಾನ್‌– ಎಎಫ್‌ಪಿ ಚಿತ್ರ   

ನವದೆಹಲಿ: ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ಅಥ್ಲೀಟ್‌, ಸ್ಕೀಯಿಂಗ್ ಪಟು ಆರಿಫ್ ಖಾನ್ ನೇತೃತ್ವದ ಭಾರತ ತಂಡವು ಚೀನಾದ ಬೀಜಿಂಗ್‌ಗೆಸೋಮವಾರ ರಾತ್ರಿ ಪ್ರಯಾಣ ಬೆಳೆಸಿತು.

ಆರಿಫ್ ಖಾನ್ ಅವರೊಂದಿಗೆ ಚೆಫ್‌ ಡಿ ಮಿಶನ್‌ ಹರ್ಜಿಂದರ್ ಸಿಂಗ್ ಮತ್ತು ನೆರವು ಸಿಬ್ಬಂದಿ ಒಲಿಂಪಿಕ್ಸ್ ನಡೆಯಲಿರುವ ಚೀನಾದ ರಾಜಧಾನಿಗೆ ತೆರಳಿದರು. ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ತಂಡಕ್ಕೆ ಶುಭ ಹಾರೈಸಿದರು. ಶುಕ್ರವಾರದಿಂದ ಕ್ರೀಡಾಕೂಟ ಆರಂಭವಾಗಲಿದೆ.

ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಿರುವ ಆರಿಫ್‌ ಖಾನ್‌ ಅಗ್ರ 30ರೊಳಗೆ ಸ್ಥಾನ ಗಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಫೆಬ್ರುವರಿ 20ರಂದು ಒಲಿಂಪಿಕ್ಸ್ ಮುಕ್ತಾಯಗೊಳ್ಳಲಿದ್ದು, 19ರಂದು ಭಾರತ ತಂಡವು ತವರಿಗೆ ಮರಳಲಿದೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನ ಆರಿಫ್, ಬೀಜಿಂಗ್‌ನಲ್ಲಿ ಸ್ಲಾಲೋಮ್ ಮತ್ತು ಜೈಂಟ್ ಸ್ಲಾಲೋಮ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆಗಳು ಫೆಬ್ರುವರಿ 13 ಮತ್ತು 16ರಂದು ನಡೆಯಲಿವೆ.

31 ವರ್ಷದ ಆರಿಫ್, ಈ ಹಿಂದೆ ಸಪೊರೊದಲ್ಲಿ ನಡೆದ 2017ರ ಏಷ್ಯನ್ ಚಳಿಗಾಲದ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದರು.

ಕಳೆದ ಡಿಸೆಂಬರ್‌ನಲ್ಲಿ ಐಒಎ ಚಳಿಗಾಲದ ಒಲಿಂಪಿಕ್ಸ್‌ಗಾಗಿ ತಂಡದ ಚೆಫ್ ಡಿ ಮಿಷನ್ ಆಗಿ ಭಾರತ ಐಸ್ ಹಾಕಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹರ್ಜಿಂದರ್ ಅವರನ್ನು ನೇಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.