ADVERTISEMENT

ಫ್ರೀಸ್ಟೈಲ್‌ ಚೆಸ್‌ ಟೂರ್ನಿ: ಅರ್ಜುನ್, ಹಿಕಾರು ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 21:30 IST
Last Updated 9 ಏಪ್ರಿಲ್ 2025, 21:30 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಪ್ಯಾರಿಸ್‌: ವಿಶ್ವದ ನಾಲ್ಕನೆ ಶ್ರೇಯಾಂಕಿತ ಆಟಗಾರ ಅರ್ಜುನ್ ಎರಿಗೈಸಿ ಫ್ರೀಸ್ಟೈಲ್‌ ಚೆಸ್‌ ಟೂರ್ನಿಯ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಬುಧವಾರ ಅಮೆರಿಕದ ಹಿಕಾರು ನಕಾಮುರಾ ವಿರುದ್ಧ ಡ್ರಾ ಸಾಧಿಸಿದ್ದಾರೆ. 
ರ್‍ಯಾಪಿಡ್‌ ವಿಭಾಗಕ್ಕೆ ನಾಲ್ಕನೆ ಸ್ಥಾನ ಪಡೆದು ಅರ್ಹತೆ ಪಡೆದ ಅರ್ಜುನ್‌ ಎಂಟರ ಘಟ್ಟದಲ್ಲಿ ಹಿಕಾರು ನಕಾಮುರಾ ವಿರುದ್ಧ ಸೆಣೆಸಿದರು.ಹಂಗೇರಿಯಾ ರಿಚರ್ಡ್‌ ರಾಪೋರ್ಟ್‌ ವಿರುದ್ಧ ವಿಶ್ವ ಚಾಂಪಿಯನ್‌ ಡಿ.ಗುಕೇಶ್‌ ಶರಣಾದರು. 

ವಿಧಿತ್‌ ಗುಜರಾತಿ ತಪ್ಪುಗಳನ್ನು ಮಾಡಿದ್ದರಿಂದ ಆರ್‌.ಪ್ರಜ್ಞಾನಂದ ವಿರುದ್ಧ ಸೋತರು.

ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಉಜ್ಬೇಕಿಸ್ತಾನದ ನೊಡಿರ್ಬೆಕ್‌ ಅಬ್ದುಸಾಟ್ಟೊರೊವ್‌ ವಿರುದ್ಧ ಜಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.